ಗಾಳಿಪಟ ಹಿಡಿಯಲು ಹೋಗಿ ಕಟ್ಟಡ ಮೇಲಿಂದ ಬಿದ್ದು ಯುವಕ ಸಾವು

0 Min Read

ಬೀದರ್: ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

ಶಶಿಕುಮಾರ್ ಶಿವಾನಂದ (19) ಮೃತ ದುರ್ದೈವಿ. ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಗಿಲ್ಲಿ ನಟನೇ ಬಿಗ್‌ಬಾಸ್ ಗೆದ್ದು ಬರಲಿ – ಶಾಸಕ ನಂಜೇಗೌಡ ಶುಭಹಾರೈಕೆ

ಗಾಳಿಪಟ ಹಾರಿಸುವಾಗ ದಾರ ತುಂಡಾಗಿದ್ದು, ಈ ವೇಳೆ ಹಾರಿಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article