ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

Public TV
2 Min Read

ಬೆಂಗಳೂರು: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಯುವಕ ಡೆತ್‌ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್‌ನ (Mahalakshmi Layout) ಎಸ್‌ಜೆ ನಗರದಲ್ಲಿ ನಡೆದಿದೆ.

ನವೀನ್ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಮೂಲತಃ ಚಾಮರಾಜನಗರ (Chamarajanagara) ನಿವಾಸಿಯಾದ ನವೀನ್ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕುಟುಂಬದವರೇ ಬಾಳೆಕಾಯಿ ಮಂಡಿ ಹಾಕಿಕೊಟ್ಟಿದ್ದರು. ಈ ವೇಳೆ ನವೀನ್‌ಗೆ ಯುವತಿಯೊಬ್ಬಳು ಪರಿಚಯವಾಗಿ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಇಬ್ಬರೂ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡಿ ಮದುವೆಯ ಕನಸು ಕೂಡಾ ಕಂಡಿದ್ದರು. ಇದನ್ನೂ ಓದಿ: ಪತ್ನಿ, ಸೋದರಳಿಯನಿಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಎಸಿಪಿ

ಈ ವಿಚಾರವನ್ನು ನವೀನ್ ತನ್ನ ಮನೆಯಲ್ಲೂ ತಿಳಿಸಿದ್ದ. ಆದರೆ ಯುವತಿ ಇತ್ತೀಚಿಗೆ ಪ್ರಿಯಕರ ನವೀನ್‌ನನ್ನು ನಿರ್ಲಕ್ಷಿಸಲು ಶುರುಮಾಡಿದ್ದಳು. ಇದರಿಂದ ನೊಂದ ನವೀನ್ ಯುವತಿಯನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ ಯುವತಿ ಮಾತ್ರ ಡೋಂಟ್ ಕೇರ್ ಎನ್ನುವ ರೀತಿ ವರ್ತಿಸಲು ಶುರುಮಾಡಿದ್ದಳು. ಇದನ್ನೂ ಓದಿ: ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!
ಈ ಮಧ್ಯೆ ಯುವತಿ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎನ್ನುವ ವಿಚಾರ ತಿಳಿದ ನವೀನ್ ಮತ್ತಷ್ಟು ಕೋಪಗೊಂಡಿದ್ದ. ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದಾಳೆ ಎಂದು ಯುವತಿಯ ಕಡೆಯವರಿಗೂ ರಾಜಿ ಸಂಧಾನಕ್ಕೆ ಒತ್ತಾಯಿಸಿದ್ದ. ಈ ಬಗ್ಗೆ ಮನೆಯವರು ಕೂಡಾ ಬುದ್ಧಿ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ. ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ATMನಲ್ಲಿದ್ದ 15 ಲಕ್ಷ ದರೋಡೆ

ಕೊನೆಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ನೊಂದ ಪ್ರಿಯಕರ ನವೀನ್ ಕೊನೆಯದಾಗಿ ಭಾನುವಾರ ಸಂಜೆ ಯುವತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳೀ ಫೋನ್ ಕಟ್ ಮಾಡಿದ್ದ. ಇದರಿಂದ ಗಾಬರಿಗೊಂಡ ಯುವತಿ ನೂರಕ್ಕೂ ಹೆಚ್ಚು ಬಾರಿ ವಾಪಸ್ ಕರೆ ಮಾಡಿದ್ದಾಳೆ. ಆದರೆ ನವೀನ್ ಫೋನ್ ರಿಸೀವ್ ಮಾಡಿಲ್ಲ. ಬದಲಾಗಿ ಇವರಿಬ್ಬರ ಪ್ರೀತಿ, ಹುಡುಗಿ ಮದುವೆ ಆಗುವುದಾಗಿ ಹೇಗೆ ಮೋಸ ಮಾಡಿದ್ಳು ಎನ್ನುವುದನ್ನು ಡಿಟೇಲ್ ಆಗಿ ಡೆತ್‌ನೋಟಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: 4 ವರ್ಷ ಪ್ರೀತಿಸಿ ಕೈಕೊಟ್ಟ ಪ್ರಿಯಕರ- ಇಲಿ ಪಾಷಾಣ ತಿಂದು ಆಸ್ಪತ್ರೆ ಸೇರಿದ್ದ ಯುವತಿ ಸಾವು

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್