ಪ್ರಿಯತಮೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ ಆರೋಪ – ಹೆದರಿ ಯುವಕ ಆತ್ಮಹತ್ಯೆ

Public TV
1 Min Read

ವಿಜಯನಗರ: 4 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯ ಕುಟುಂಬಸ್ಥರು ಕೊಲೆ ಬೆದರಿಕೆ ಹಾಕಿದ್ದಕ್ಕೆ ಹೆದರಿ ಯುವಕನೊಬ್ಬ ನೇಣಿಗೆ ಶರಣಾಗಿರುವುದು ಹರಪ್ಪನಹಳ್ಳಿಯ (Harappanahalli) ಉದ್ಧಟ್ಟಿ ದೊಡ್ಡತಾಂಡದಲ್ಲಿ ನಡೆದಿದೆ.

ಶಶಿಕುಮಾರ್ ನಾಯ್ಕ್ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಅದೇ ಗ್ರಾಮದ ಯುವತಿಯನ್ನು 4 ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿ ಮನೆಯವರು ಮದುವೆಗೆ ನಿರಾಕರಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯ | ಚಾಕೊಲೇಟ್ ಆಸೆ ತೋರಿಸಿ 4 ವರ್ಷದ ಮಗುವಿನ ಮೇಲೆ ರೇಪ್

ಇದರಿಂದ ಬೇಸತ್ತು ಆತ ನೇಣಿಗೆ ಶರಣಾಗಿದ್ದಾನೆ. ಯುವಕನ ಸಾವಿಗೆ ಪ್ರಿಯತಮೆಯ ಕುಟುಂಬಸ್ಥರ ಬೆದರಿಕೆಯೇ ಕಾರಣ ಎಂದು ಆರೋಪಿಸಿ ಹರಪ್ಪನಹಳ್ಳಿ ಪೊಲೀಸ್ ಠಾಣೆಗೆ ಶಶಿಕುಮಾರ್ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್‌ ಕೇಸ್‌ – ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

Share This Article