ಇನ್ಸ್ಟಾದಲ್ಲಿ ಯುವತಿಗೆ ಲೈಕ್, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯಿಂದ ತರಾಟೆ – ಯುವಕ ಆತ್ಮಹತ್ಯೆ

Public TV
1 Min Read

ಮಂಗಳೂರು: ಇನ್ಸ್ಟಾಗ್ರಾಂನಲ್ಲಿ (Instagram) ಪರಿಚಯವಾಗಿದ್ದ ಹುಡುಗಿಗೆ ಲೈಕ್ ಕೊಟ್ಟಿದ್ದಕ್ಕೆ ಯುವಕನೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದು, ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ (Bantwal) ಪೂಂಜಾಲಕಟ್ಟೆಯ ಕುಕ್ಕಿಪ್ಪಾಡಿ ಎಂಬಲ್ಲಿ ನಡೆದಿದೆ.

ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಚೇತನ್‌ಗೆ ಕುಂದಾಪುರದ ಚೈತನ್ಯ ಎಂಬ ಯುವತಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು. ಬಳಿಕ ಪ್ರೀತಿಸಿ 8 ತಿಂಗಳ ಹಿಂದೆ ಇವರಿಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಜ.21ರಂದು ಚೇತನ್ ತನ್ನ ಪರಿಚಯದ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಲೈಕ್ ನೀಡಿದ್ದ. ಇದನ್ನು ಪ್ರಶ್ನಿಸಲು ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಚೇತನ್ ಮನೆಗೆ ಬಂದಿದ್ದಳು. ಈ ವೇಳೆ ಚೇತನ್ ತಾಯಿ ಮನೆಯಲ್ಲಿ ಇರಲಿಲ್ಲ. ಚೇತನ್ ಓರ್ವನೇ ಇದ್ದ. ಲೈಕ್ ನೀಡಿದ್ದಕ್ಕೆ ಯುವತಿ ಚೇತನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಮನನೊಂದ ಚೇತನ್ ಯುವತಿ ಮನೆಯಲ್ಲಿ ಇರುವ ಸಂದರ್ಭದಲ್ಲೇ ಮನೆಯೊಳಗೆ ತೆರಳಿ ಮನೆಯ ಮೇಲ್ಛಾವಣಿಗೆ ಬಟ್ಟೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂಓದಿ: ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್‌ ಕತ್ತಿ ರಾಜೀನಾಮೆ

ಬಳಿಕ ಚೇತನ್ ತಾಯಿಗೆ ಚೈತನ್ಯ ಕರೆ ಮಾಡಿ ಮಲಗಿದ್ದಾತ ಏಳುತ್ತಿಲ್ಲ ಎಂದು ಹೇಳಿ ಕರೆಸಿಕೊಂಡಿದ್ದಾಳೆ. ಬಳಿಕ ಮನೆಯ ಮೆಲ್ಛಾವಣಿಯಲ್ಲಿ ನೇಣು ಬಿಗಿದ ಕುಣಿಕೆ ಸಿಕ್ಕಿದೆ. ನೇಣು ಬಿಗಿದ ಬಳಿಕ ಚೇತನ್‌ನನ್ನು ಯುವತಿಯೇ ಕೆಳಗೆ ಇಳಿಸಿದ್ದಳು. ಘಟನೆ ಸಂಬಂಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ

 

Share This Article