70 ಸಾವಿರದ ಐಫೋನ್ ಯಾಕೆ ತಗೊಂಡೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ!

By
1 Min Read

ಬೆಳಗಾವಿ: ಐಫೋನ್ (iPhone) ತಗೊಂಡಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ನೆಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ (Belagavi) ನ್ಯೂ ವೈಭವ ನಗರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ (24) ಎಂದು ಗುರುತಿಸಲಾಗಿದೆ. ಯುವಕ ಇಎಂಐ ಮೂಲಕ 70 ಸಾವಿರ ರೂ. ಬೆಲೆಯ ಐಫೋನ್ ಖರೀದಿಸಿದ್ದ. ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ದೀಯಾ? ಕಡಿಮೆ ದರದ ಮೊಬೈಲ್ ತೆಗೆದುಕೊಳ್ಳಬೇಕಿತ್ತು ಎಂದು ತಂದೆ ತಿಳುವಳಿಕೆ ಹೇಳಿದ್ದರು.

ಇದೇ ವಿಚಾರಕ್ಕೆ ಮನನೊಂದ ಮನೆಯ ರೂಮ್‍ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article