ಮದ್ವೆಯಾಗೋದಾಗಿ ನಂಬಿಸಿ ಸುಂದರಿ ವಂಚನೆ- ಯುವಕ ಆತ್ಮಹತ್ಯೆ

Public TV
1 Min Read

ಮಡಿಕೇರಿ: ಪ್ರೀತಿ ಮಾಯೆ ಹುಷಾರು ಅಂತಾರೆ. ಅದೇ ಪ್ರೀತಿಯನ್ನು ನಂಬಿ ಇಲ್ಲೊಬ್ಬ ಯುವ ಪ್ರಾಣ ಕಳೆದುಕೊಂಡರೆ, ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಮದುವೆಯಾಗೊದಾಗಿ ನಂಬಿಸಿ ಹಣವನ್ನು ದೋಚುತ್ತಿದ್ದ ಮಹಿಳೆಯೊಬ್ಬಳ ಬಣ್ಣ (Woman Cheating)  ಬಯಲಾಗಿದೆ.

ಹೌದು, ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದ ಅಜಿತ್ ಎಂಬಾತನಿಗೆ 4 ವರ್ಷದ ಹಿಂದೆ ಪರಕಟಗೇರಿಯ ನಿವಾಸಿ ಕೆ.ಬಿನ್ಯ ಎಂಬ ಮಹಿಳೆಯ ಪರಿಚಯವಾಗುತ್ತೆ. ಪರಿಚಯ ಪ್ರೀತಿಗೆ ತಿರುಗಿ 27 ವರ್ಷದ ಯುವಕ ತನ್ನ ಬಳಿ ಇದ್ದ ಹಣ, ಚಿನ್ನಾಭರಣಗಳನ್ನು ಆಕೆಗೆ ನೀಡಿದ್ದಾನೆ. ಅಜಿತ್‍ನಿಂದ ಸುಮಾರು 12 ಲಕ್ಷಕ್ಕೂ ಅಧಿಕ ಹಣದೋಚಿದ ಮಹಿಳೆ ಕೊಡಗಿನ ಟಿ.ಎಸ್ಟೇಟ್ ಒಂದರಲ್ಲಿ ಉದ್ಯೋಗದಲ್ಲಿರುವ ಪಿ.ಎಂ. ಕಿರಣ್‍ಕುಮಾರ್ ಪರಿಚಯ ಮಾಡಿಕೊಂಡು ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ. ಇದರಿಂದ ಮನನೊಂದ ಅಜಿತ್ ವಿಷ ಕುಡಿದು ಸೂಸೈಡ್ ಮಾಡಿಕೊಂಡಿದ್ದಾನೆ.

ಈ ಸುಂದರಿಯ ಮೋಸದ ಜಾಲಕ್ಕೆ 8 ರಿಂದ 9 ಯುವಕರು ಮೋಸ ಹೋಗಿದ್ದಾರೆ ಅಂತ ಅಜಿತ್ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾನೆ. ಗೋಣಿಕೊಪ್ಪ ಪೊಲೀಸರು ವಂಚಕಿ ಕೆ.ಬಿನ್ಯ ಹಾಗೂ ಕಿರಣ್ ಗೌಡನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 12,900 ರೂ.ಹಣವನ್ನ ಪೊಲೀಸರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು

ಒಟ್ಟಿನಲ್ಲಿ ಈ ಮಹಿಳೆಗೆ ತನ್ನ ಸೌಂದರ್ಯದಿಂದ ಸಾಕಷ್ಟು ಯುವಕರನ್ನು ವಂಚನೆ ಮಾಡುವುದೇ ಕಾಯಕವಾಗಿದೆ. ಇತ್ತ ಪ್ರೀತಿಯ ಮೋಹಕ್ಕೆ ಸಿಲುಕಿದ ಯುವಕ ತನ್ನಲ್ಲಿಂದ ಹಣ ಚಿನ್ನ ಹಾಗೂ ಸಾಲ ಮಾಡಿಕೊಟ್ಟು ಮನೆಯರ ಬಗ್ಗೆಯೂ ಚಿಂತೆ ಮಾಡದೇ ಇಹಲೋಕ ತ್ಯಜಿಸಿದ್ದು ಮಾತ್ರ ದುರಂತವೇ ಸರಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್