ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ

Public TV
1 Min Read

ಬೆಂಗಳೂರು: ಮೆಟ್ರೋ ರೈಲು ಮುಂದೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ರೈಲು ಹಳಿಗೆ ಧುಮುಕಿದ ಯುವಕನ ಗುರುತು ಪತ್ತೆಯಾಗಿದೆ. ಕೇರಳ ಮೂಲದ 23 ವರ್ಷದ ಶಾರೋನ್‌ ರಾತ್ರಿ 7.12ರ ವೇಳೆಗೆ ರೈಲು ಬಂದಾಗ ಉದ್ದೇಶಪೂರ್ವಕವಾಗಿಯೇ ರೈಲು ಹಳಿಗೆ ಹಾರಿದ್ದಾನೆ ಎನ್ನಲಾಗಿದೆ.

ಏನಾಯ್ತು..?: ಕೇರಳ (Kerala) ಮೂಲದ ಯುವಕ ಶಾರೋನ್‌ ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ (Jalahalli Metro Station) ಬಂದಿದ್ದ. ಮೆಜೆಸ್ಟಿಕ್ ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಆದರೆ ಮೆಟ್ರೋ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಧುಮುಕಿದ್ದಾನೆ, ಈ ವೇಳೆ ಮೆಟ್ರೊ ಟ್ರೈನ್ ಶಾರೋನ್‌ಗೆ ಡಿಕ್ಕಿ ಹೊಡೆದಿದೆ. ಸ್ನೇಹಿತನ ಜೊತೆ ಬಂದು ಉದ್ದೇಶಪೂರ್ವಕವಾಗಿ ಹಳಿಗೆ ಧುಮುಕಿದ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಯುವಕನನ್ನು ಮೆಟ್ರೋ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಸಪ್ತಗಿರಿ ಆಸ್ಪತ್ರೆಯ ಐಸಿಯುವಿನಲ್ಲಿ ಯುವಕ ಶಾರೋನ್‍ಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೈಲು ಡಿಕ್ಕಿಯಾದ ಹಿನ್ನೆಲೆಯಲ್ಲಿ ಯುವಕನ ಕಾಲು ಫ್ರ್ಯಾಕ್ಚರ್ ಆಗಿದ್ದು, ತಲೆಗೆ ಕರೆಂಟ್ ಶಾಕ್ ತಗುಲಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಹಳಿಗೆ ಹಾರಿದ ಪ್ರಯಾಣಿಕ – 45 ನಿಮಿಷ ಸಂಚಾರ ವ್ಯತ್ಯಯ!

ಅಬ್ಬಿಗೆರೆ ಬಳಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕನಿಗೆ ಕಂಪನಿಯವರೇ ವಾಸ್ತವ್ಯಕ್ಕೆ ರೂಂ ಸಹ ಮಾಡಿಕೊಟ್ಟಿದ್ರು. ಪೀಣ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article