ಇನ್‌ಸ್ಟಾದಲ್ಲಿ ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ – ಕಾಮುಕ ಅರೆಸ್ಟ್

Public TV
1 Min Read

ಬೆಂಗಳೂರು: ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋ ತೆಗೆದು ಅದನ್ನ ಇನ್‌ಸ್ಟಾಗ್ರಾಮ್‌ ಸೋಶಿಯಲ್‌ ಮೀಡಿಯಾ (Social Media) ಖಾತೆಯಲ್ಲಿ ಪೋಸ್ಟ್ ಮಾಡ್ತಿದ್ದ ಯುವಕನನ್ನ ಅಶೋಕನಗರ ಪೊಲೀಸರು (Ashokanagara Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹುಸೇನ್ (19) ಎಂದು ಗುರುತಿಸಲಾಗಿದೆ. ಆರೋಪಿಯು ದಿಲ್ಬರ್ ಜಾನಿ ಎಂಬ ಇನ್‌ಸ್ಟಾ ಖಾತೆಯಲ್ಲಿ ಯುವತಿಯರ ಅಸಭ್ಯ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

ಎಂ.ಜಿ ರೋಡ್, ಬ್ರಿಗೆಡ್ ರೋಡ್‌ನಂತಹ ಜಾಗಗಳಲ್ಲಿ ರಾತ್ರಿ ಯುವತಿಯರ ಅನುಮತಿ ಇಲ್ಲದೆ ಫೋಟೋ, ವಿಡಿಯೋ ತೆಗೆದು ಬೆಂಗಳೂರು ನೈಟ್ ಲೈಫ್ ಎಂದು ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದ. ಇದನ್ನೂ ಓದಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ – ಬರೋಬ್ಬರಿ 49 ಲಕ್ಷ ಹಣ, 4 ಕಾರು, 15 ಮೊಬೈಲ್‌ ಸೀಜ್‌, 19 ಮಂದಿ ಬಂಧನ

ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Share This Article