ದಾವಣಗೆರೆ | ಯುವತಿಗೆ ಕಮಿಷನ್ ಆಸೆ ತೋರಿಸಿ 13 ಲಕ್ಷ ನಾಮ!

Public TV
1 Min Read

ದಾವಣಗೆರೆ: ಯುವತಿಯೊಬ್ಬಳಿಗೆ ಸೈಬರ್ ವಂಚಕರು (Cyber Crime) ಕಮಿಷನ್ ಆಸೆ ತೋರಿಸಿ 13 ಲಕ್ಷ ರೂ. (Money) ವಂಚಿಸಿದ ಘಟನೆ ನಡೆದಿದೆ.

ದಾವಣಗೆರೆಯ (Davanagere) ಎಂಸಿಸಿ ಬ್ಲಾಕ್‍ನಲ್ಲಿ ವಾಸವಾಗಿದ್ದ 26 ವರ್ಷದ ಹರಿಯಾಣ ಮೂಲದ ಯುವತಿ ವಂಚನೆಗೊಳಗಾಗಿದ್ದಾಳೆ. ಟೆಲಿಗ್ರಾಮ್ ಮೂಲಕ ಪರಿಚಯವಾಗಿದ್ದ ಮಹಿಳೆಯೊಬ್ಬಳು, ಕಮಿಷನ್ ಆಸೆ ತೋರಿಸಿ ಯುವತಿಗೆ ಹಣ ಹೂಡಿಕೆ ಮಾಡುವಂತೆ ಹೇಳಿದ್ದಳು. ಅಲ್ಲದೇ ಯುವತಿಗೆ ಉದ್ಯೋಗ ಕೊಡಿಸುವುದಾಗಿಯೂ ಭರವಸೆ ನೀಡಿದ್ದಳು. ಮಹಿಳೆಯ ಮಾತನ್ನು ನಂಬಿದ ಯುವತಿ ಹಂತಹಂತವಾಗಿ 13 ಲಕ್ಷ ರೂ. ಹಣ ವರ್ಗಾಯಿಸಿದ್ದಳು. ಇದನ್ನೂ ಓದಿ: ಭಾರತ – ಪಾಕ್‌ ಗಡಿಯಲ್ಲಿರೋ 4 ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್

ಹಣ ಬಿಡಿಸಿಕೊಳ್ಳಲು ಹೋದ ವೇಳೆ, ಯುವತಿಗೆ ವಂಚನೆಯಾಗಿರುವುದು ಗೊತ್ತಾಗಿದೆ. ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆಗೆ ಜಮೀನುಗಳು ಜಲಾವೃತ – ಲಕ್ಷಾಂತರ ಮೌಲ್ಯದ ಬೆಳೆ ನಾಶ, ರೈತರು ಕಂಗಾಲು

Share This Article