ಬೆಂಗಳೂರು: ಮನೆಗೆ ತಡವಾಗಿ ಬಂದಾಗ ಅಣ್ಣ ಪ್ರಶ್ನಿಸಿದ್ದಕ್ಕೆ ತಮ್ಮ ಶೂಟ್ ಮಾಡಿಕೊಳ್ಳಲು ಮುಂದಾದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಘಟನೆ ಡಿ.20 ರ ಮುಂಜಾನೆ ನಗರದ ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿ ನಡೆದಿದೆ. ಸ್ನೇಹಿತ ಫೈಜಲ್ ಜೊತೆ ಸಲ್ಮಾನ್ ಮನೆಗೆ ತಡವಾಗಿ ಬಂದಿದ್ದಾನೆ. ಹೀಗೆ ತಡವಾಗಿ ಬಂದಿದ್ದನ್ನು ನೋಡಿ ಅಣ್ಣ ಅಮಿನ್ ದಾದ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಅಣ್ಣನ ಲೈಸೆನ್ಸ್ ಪಿಸ್ತೂಲ್ ತೆಗೆದುಕೊಂಡು ಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾನೆ.
ಅದನ್ನ ಬಿಡಿಸಲು ಹೋದಾಗ ಮೂರು ರೌಂಡ್ಸ್ ಫೈರ್ ಮಾಡಲಾಗಿದೆ. ಘಟನೆಯಲ್ಲಿ ಸಲ್ಮಾನ್ ಸ್ನೇಹಿತ ಫೈಜಲ್ ಕೈಗೆ ಗುಂಡು ತಗುಲಿದೆ. ಕೂಡಲೇ ಫೈಜಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

 
			
 
		 
		
 
                                
                              
		