ಪಾಕ್‌ ಬೆದರಿಕೆ ಬಗ್ಗೆ ಮೌನ ಯಾಕೆ? ನೀವು ರಾಜೀನಾಮೆ ಕೊಡಿ: ಮೋದಿ ವಿರುದ್ಧ ಬ್ಯಾನರ್ಜಿ ಗುಡುಗು

1 Min Read

ನವದೆಹಲಿ: ಕೋಲ್ಕತ್ತಾ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಬೆದರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಏಕೆ ಮಾತನಾಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಪ್ರಶ್ನಿಸಿದ್ದಾರೆ.

ನಾಡಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು (ಪ್ರಧಾನಿ) ಚುನಾವಣಾ ರ‍್ಯಾಲಿಗಳಲ್ಲಿ ಬಂಗಾಳವನ್ನು ಗುರಿಯಾಗಿಸಿಕೊಂಡಿದ್ದೀರಿ. ಆದರೆ, ಪಾಕಿಸ್ತಾನ ಬಂಗಾಳದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡುವಾಗ, ನೀವು ಒಂದು ಮಾತನ್ನೂ ಆಡುವುದಿಲ್ಲ ಯಾಕೆ? ನೀವು ರಾಜೀನಾಮೆ ನೀಡಬೇಕು ಎಂದು ಪ್ರಧಾನಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಸಿಎಂ ಪೆಮಾ ಖಂಡು ಕುಟುಂಬದ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಬಂಗಾಳದಲ್ಲಿ ನಡೆದ ತಮ್ಮ ರ‍್ಯಾಲಿಯಲ್ಲಿ ಪ್ರಧಾನಿ ಈ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ? ಪಾಕಿಸ್ತಾನದ ರಕ್ಷಣಾ ಸಚಿವರು ಕೋಲ್ಕತ್ತಾ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದಾಗ, ಪ್ರಧಾನಿಯವರು ನಾವು ಬಲವಾದ ಕ್ರಮ ಕೈಗೊಳ್ಳುತ್ತೇವೆ ಅಂತ ಏಕೆ ಹೇಳಲಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ದೇಶ ಮತ್ತು ರಾಜ್ಯಕ್ಕೆ ಬರುವ ಬೆದರಿಕೆಗಳನ್ನು ನಾವು ಸಹಿಸುವುದಿಲ್ಲ. ನಾವು ದೇಶಕ್ಕೆ ಬರುವ ಯಾವುದೇ ಬೆದರಿಕೆಯನ್ನು ಸ್ವೀಕರಿಸಲ್ಲ. ಅಂತೆಯೇ, ಕೋಲ್ಕತ್ತಾಗೆ ಬರುವ ಬೆದರಿಕೆಯನ್ನು ನಾವು ತೆಗೆದುಕೊಳ್ಳಲ್ಲ ಎಂದು ಕಟುವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಅಮೆರಿಕ – ಇಸ್ರೇಲಿ ದಾಳಿಯಲ್ಲಿ ಇರಾನ್‌ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆ

ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ ನಂತರ ಈ ಹೇಳಿಕೆ ನೀಡಲಾಗಿದೆ. ಎರಡೂ ಕಡೆಯವರು ಬಲವಾದ ಎಚ್ಚರಿಕೆಗಳನ್ನು ನೀಡಿದ್ದಾರೆ.

Share This Article