ಮುಂಬೈ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.
ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ಸೋಮವಾರ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಮದುವೆಯ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಮತ್ತು ಬಾಲಿವುಡ್ ಮಂದಿಯಿಂದ ಶುಭಾಶಯಗಳ ಮಹಾಪೂರ ಹರಿಯುತ್ತಿದೆ.
3 ವರ್ಷಗಳ ಹಿಂದೆ ಅನುಷ್ಕಾ ತಮ್ಮ ಮದುವೆಯ ಕನಸಿನ ಬಗ್ಗೆ ಹೇಳಿದ್ದರು. ಮಿಲನ್ ಎಂಬ ಈ ಸ್ಥಳ ಮದುವೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಈ ಸುಂದರ ತಾಣದಲ್ಲಿ ಮದುವೆ ಕಾರ್ಯಕ್ರಮಗಳು ಮಾತ್ರ ನಡೆಯುತ್ತದೆ.
ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ
700 ವರ್ಷ ಹಳೆಯಾದ ಈ ರೆಸಾರ್ಟ್ ಟಸ್ಕನಿ ಬೆಟ್ಟದ ಹಿಂದೆ ಇದೆ. ಇದು ಒಂದು ಗ್ರಾಮವಾಗಿದ್ದು, ಅಮೆರಿಕದ ರಾಯಭಾರಿ ಜಾನ್ ಫಿಲಿಪ್ಸ್ ಅವರು 2001ರಲ್ಲಿ ಇದನ್ನು ಖರೀದಿಸಿ ನವೀಕರಿಸಿದ್ದರು. ‘ಬೋಗೋ ಫಿನೊಕಿಯೆಟೊ’ ರೆಸಾರ್ಟ್ ನಲ್ಲಿ 5 ಐಷಾರಾಮಿ ವಿಲ್ಲಾಗಳಿದ್ದು, 22 ಕೋಣೆಗಳಿವೆ. 44 ಮಂದಿಗೆ ತಂಗಲು ವ್ಯವಸ್ಥೆ ಇದೆ. ಈ ಕಾರಣಕ್ಕಾಗಿ ವಿರಾಟ್ ಹಾಗೂ ಅನುಷ್ಕಾ ಹೆಚ್ಚು ಜನರಿಗೆ ಆಹ್ವಾನ ನೀಡಲಿಲ್ಲ ಎಂದು ಹೇಳಲಾಗಿದೆ.
ಈ ರೆಸಾರ್ಟ್‍ನಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಸ್ವಿಮ್ಮಿಂಗ್ ಪೂಲ್, ಟೆನಿಸ್ ಕೋರ್ಟ್, ಸ್ಪಾ ಜೊತೆ ರುಚಿಕರವಾದ ಆಹಾರ ನೀಡಲಾಗುತ್ತದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಬೋಗೋ ಫಿನೊಕಿಯೆಟೊ ರೆಸಾರ್ಟ್ ಹಾಲಿಡೇ ಡೆಸ್ಟಿನೇಷನ್ ಗಳಲ್ಲಿ ಇದು ಒಂದಾಗಿದೆ. ಇಲ್ಲಿ ಒಂದು ವಾರ ಉಳಿದರೆ ಒಂದು ಕೋಟಿ ರೂ. ಗಿಂತ ಹೆಚ್ಚು ವೆಚ್ಚವಾಗುತ್ತದೆ. ಒಂದು ರಾತ್ರಿ ಕಳೆಯಲು 6.50 ಲಕ್ಷ ದಿಂದ 14 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
https://youtu.be/gHvF38xCsiY