‘ಯೂ ಆರ್ ಮೈ ಹೀರೋ’ ಅಂತಿದ್ದಾರೆ ನಾಯಕಿ ಸಂಹಿತಾ ವಿನ್ಯಾ

Public TV
2 Min Read

ನ್ನಡದಲ್ಲಿ ‘ಯಾಕೋ ಬೇಜಾರು’,  ‘ದಿ ಕೇಸ್‌ ಅಫ್‌ ಹಂಸ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಂಹಿತಾ ವಿನ್ಯಾ, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ತಮಿಳಿನ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಅದರ ಅರ್ಧ ಶೂಟಿಂಗ್‌ ಸಹ ಈಗಾಗಲೇ ಮುಗಿದಿದೆ. ಅಲ್ಲದೇ, ನಿರ್ದೇಶಕ ಶೇರ್‌ ಅವರ ಬಾಲಿವುಡ್‌ ಪ್ರಾಜೆಕ್ಟ್‌ನಲ್ಲಿಯೂ ಸಂಹಿತಾ ನಟಿಸಲಿದ್ದಾರೆ.

ಮಾಡೆಲಿಂಗ್‌ನಿಂದ ಆರಂಭವಾದ ಸಂಹಿತಾ ವಿನ್ಯಾ ಅವರ ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಹಾಗಂತ ಮಾಡೆಲಿಂಗ್‌ ಅವರ ಕೈ ಬಿಟ್ಟಿಲ್ಲ. ಅವಕಾಶ ಎಲ್ಲೆಲ್ಲಿ ಸಿಗುತ್ತದೆಯೋ ಅಲ್ಲಿ ಪ್ರತಿಭೆಯ ಅನಾವರಣ ಮಾಡುತ್ತಿದ್ದಾರವರು. ಇದೀಗ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮೇಲೆಯೇ ಹೋಗಿದ್ದಾರೆ. ಅಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಸಿನಿಮಾದ ಹೆಸರು “ಯೂ ಆರ್‌ ಮೈ ಹೀರೋ”. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗೆ ಡಬ್‌ ಆಗಿ ತೆರೆಗೆ ಬರಲಿದೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

ಈ ಬಗ್ಗೆ ಹೇಳಿಕೊಳ್ಳುವ ಸಂಹಿತಾ ವಿನ್ಯಾ, “ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ತುಂಬ ಡಿಫರಂಟ್.‌ ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ” ಎಂಬುದು ಅವರ ಮಾತು.

ಅದೇ ರೀತಿ “ಯೂ ಆರ್‌ ಮೈ ಹೀರೋ” ಸಿನಿಮಾ ಬಗ್ಗೆಯೂ ಹೇಳಿಕೊಳ್ಳುವ ಅವರು, “ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ ಎನ್ನುತ್ತಾರೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

ತೆಲುಗಿನ ಈ “ಯೂ ಆರ್‌ ಮೈ ಹೀರೋ” ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಸೇರಿ ಹಲವರು ನಟಿಸಿದ್ದಾರೆ. ಶೇರ್‌ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಸಂಗೀತ, ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಿನ್ನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣ್‌ ಕಾವೇಟಿ ಛಾಯಾಗ್ರಹಣ, ಡಿ ವೆಂಕಟ್‌ ಪ್ರಭು ಅವರ ಸಂಕಲನ, ಸಾಯಿರಾಜ್‌ ನೃತ್ಯ ನಿರ್ದೇಶನವಿದೆ.

Share This Article
Leave a Comment

Leave a Reply

Your email address will not be published. Required fields are marked *