ಸಿಎಂ ಯೋಗಿ ಸೂಚನೆಯಂತೆ ತಂದೆ ಅಂತ್ಯಕ್ರಿಯೆ

Public TV
1 Min Read

ಡೆಹ್ರಾಡೂನ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಅಂತಿಮ ವಿಧಿ-ವಿಧಾನದಲ್ಲಿ ಮಂಗಳವಾರ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಫೂಲ್ ಚಟ್ಟಿಯಲ್ಲಿ ನೆರವೇರಿದೆ.

ದೆಹಲಿಯ ಏಮ್ಸ್ ನಲ್ಲಿ ಸೋಮವಾರ ಬೆಳಗ್ಗೆ 89 ವರ್ಷದ ಆನಂದ್ ಸಿಂಗ್ ಬಿಶ್ತ್ ಅವರು ನಿಧನರಾಗಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರು ತಂದೆಯ ಅಂತಿಮ ವಿಧಿ-ವಿಧಾನದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಭಾಗವಹಿಸಿದ್ದರು. ಇದನ್ನೂ ಓದಿ: ತಂದೆ ಅಂತ್ಯಕ್ರಿಯೆಗೆ ಹೋಗಲ್ಲ, ಕನಿಷ್ಠ ಮಂದಿ ಭಾಗಿಯಾಗಿ – ಸಿಎಂ ಯೋಗಿ ಸೂಚನೆ

ಆದಿತ್ಯನಾಥ್ ತನ್ನ ತಂದೆಯ ಅಂತ್ಯಸಂಸ್ಕಾರಕ್ಕೆ ಗೈರಾಗಿದ್ದರು. ಇಡೀ ದೇಶ ಕೊರೊನಾದಿಂದ ಲಾಕ್‍ಡೌನ್ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಹೀಗಾಗಿ ವೈರಸ್ ವಿರುದ್ಧ ಹೋರಾಡಲು ಲಾಕ್‍ಡೌನ್ ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಆದ್ದರಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆದಿತ್ಯನಾಥ್ ಸೋಮವಾರವೇ ತಿಳಿಸಿದ್ದರು.

ಅಷ್ಟೇ ಅಲ್ಲದೇ ಸಿಎಂ ತಮ್ಮ ಕುಟುಂಬ ಸದಸ್ಯರಿಗೆ ಲಾಕ್‍ಡೌನ್ ನಿಯಮಗಳನ್ನು ಅನುಸರಿಸುವಂತೆ ಪತ್ರದ ಮೂಲಕ ತಿಳಿಸಿದ್ದರು. ಅದರಂತೆಯೇ ಕೊರೊನಾ ವೈರಸ್ ಸಂಬಂಧ ವೈದ್ಯಕೀಯ ಮಾನದಂಡಗಳು ಜಾರಿಯಲ್ಲಿರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರೂ ಮಾಸ್ಕ್ ಧರಿಸಿದ್ದರು.

ಅಂತ್ಯಕ್ರಿಯೆಯ ಸಮಯದಲ್ಲಿ ಕನಿಷ್ಠ ಮಂದಿ ಭಾಗಿಯಾಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆಯ ಚಿತೆಗೆ ಹಿರಿಯ ಸೋದರ ಅಗ್ನಿಸ್ಪರ್ಶ ಮಾಡಿದ್ದು, ಆನಂದ್ ಸಿಂಗ್ ಬಿಶ್ತ್ ಪಂಚಭೂತಗಳಲ್ಲಿ ಲೀನನಾದರು.

ಆನಂದ್ ಸಿಂಗ್ ಬಿಶ್ತ್ ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಮಾರ್ಚ್ 15 ರಂದು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಭಾನುವಾರ ಆದಿತ್ಯನಾಥ್ ಅವರ ತಂದೆಯವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ತಕ್ಷಣ ಆದಿತ್ಯನಾಥ್ ಅವರ ತಂದೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *