ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ

Public TV
2 Min Read

ಲಕ್ನೋ: ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರಿಗಾಗಿ ಕೇವಲ 5 ಗ್ರಾಮಗಳನ್ನು ಮಾತ್ರ ಕೇಳಿದ್ದ. ಆದರಿಂದು ನಾವು ಪವಿತ್ರ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಅಯೋಧ್ಯೆ ಬಳಿಕ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಪಡೆದುಕೊಳ್ಳುವ ಸುಳಿವು ನೀಡಿದ್ದಾರೆ.

ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವಾಗ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ (Ramlalla Pran Pratishtha) ಸಮಾರಂಭದ ಕುರಿತು ಮಾತನಾಡಿದರು. ಇದೇ ವೇಳೆ ಕಾಶಿ ಮತ್ತು ಮಥುರಾ (Mathura And Kashi) ವಿವಾದಿತ ಸ್ಥಳಗಳನ್ನೂ ಉಲ್ಲೇಖಿಸಿದರು. ಇದನ್ನೂ ಓದಿ: ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು: ಈರಣ್ಣ ಕಡಾಡಿ

ಈ ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಅಯೋಧ್ಯೆಯು (Ayodhya) ಕರ್ಫ್ಯೂ ಮತ್ತು ನಿಷೇಧಗಳನ್ನು ಎದುರಿಸಿತ್ತು. ಶತಮಾನಗಳವರೆಗೆ, ಅಯೋಧ್ಯೆಯು ನೀಚ ಉದ್ದೇಶಗಳಿಗೆ ಬಲಿಯಾಯಿತು, ಅನ್ಯಾಯ ಎದುರಿಸಿತ್ತು. ನಾನು ಆ ಅನ್ಯಾಯದ ಬಗ್ಗೆ ಮಾತನಾಡುವಾಗ, 5,000 ವರ್ಷಗಳ ಹಿಂದೆ ನಡೆದ ಅನ್ಯಾಯದ ಬಗ್ಗೆ ಮಾತನಾಡಬೇಕಾಗುತ್ತದೆ. ಆ ಸಮಯದಲ್ಲಿ ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಅನ್ಯಾಯ ಸಂಭವಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಅವರು ʻಮಹಾಭಾರತʼವನ್ನು ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

ಬೇರೆ ಸ್ಥಳಗಳ ಬಗ್ಗೆ ತಕರಾರಿಲ್ಲ:
ಆ ಸಮಯದಲ್ಲಿ, ಕೃಷ್ಣನು ಕೌರವರ ಬಳಿಗೆ ಹೋಗಿ 5 ಗ್ರಾಮಗಳನ್ನು ಮಾತ್ರ ಬಿಟ್ಟುಕೊಡುವಂತೆ ಕೇಳಿದ. ಉಳಿದದ್ದನ್ನು ನಿನ್ನ ಬಳಿಯೇ ಇಟ್ಟುಕೊಳ್ಳಿ ಎಂದು ಕೃಷ್ಣ ಕೌರವರಿಗೆ ಹೇಳಿದ್ದ. ದುರ್ಯೋಧನ ಅದನ್ನೂ ಬಿಟ್ಟುಕೊಡಲಿಲ್ಲ ಎಂದು ಕವಿತೆ ಮೂಲಕ ಉದಾಹರಣೆ ಕೊಟ್ಟರು. ಆದ್ರೆ ನಾವು ಈಗ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ, ಇತರ ಸ್ಥಳಗಳ ಬಗ್ಗೆ ಯಾವುದೇ ತಕರಾರಿಲ್ಲ ಎಂದು ಸಿಎಂ ಹೇಳಿದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

ಅಯೋಧ್ಯೆ, ಮಥುರಾ ಮತ್ತು ವಾರಣಾಸಿಯ ತಾಣಗಳನ್ನು ಕೇಳುತ್ತಿದ್ದೇವೆ. ಅಯೋಧ್ಯೆ ರಾಮನ ಜನ್ಮಸ್ಥಳವಾಗಿದ್ದರೆ, ಮಥುರಾವನ್ನು ಕೃಷ್ಣನ ಜನ್ಮಸ್ಥಳ ಎಂದು ನಂಬಲಾಗಿದೆ. ವಾರಣಾಸಿಯಲ್ಲಿರುವ ಜ್ಞಾನವಾಪಿ ಸ್ಥಳವನ್ನು 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಏಕೆಂದರೆ ಹಿಂದೂ ಸಮಾಜವು ನಮ್ಮ ನಂಬಿಕೆಯ ಕೇಂದ್ರಗಳಾದ ಮೂರು ಕೇಂದ್ರಗಳನ್ನು ಮಾತ್ರ ಹುಡುಕುತ್ತಿದೆ. ಈ ಮೂರು ಕೇಂದ್ರಗಳು ನಂಬಿಕೆಗೆ ಬಹಳ ವಿಶೇಷವಾಗಿವೆ. ಇದನ್ನು ರಾಜಕೀಯಗೊಳಿಸಿದಾಗ ಮಾತ್ರ ವಿವಾದಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಇಶಾಗೆ ಡಿವೋರ್ಸ್‌ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್‌ ಅಫೇರ್‌ ಕಾರಣ?

Share This Article