ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

Public TV
1 Min Read

ಲಕ್ನೋ: ವಿರೋಧ ಪಕ್ಷಗಳು ಭಗವಾನ್ ರಾಮನ ವಿರುದ್ಧವಾಗಿವೆ, ಅಂತರ ಕಾಯ್ದುಕೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ

ರಾಮ ದ್ರೋಹಿಗಳು ಕೇವಲ ನಂಬಿಕೆಗಷ್ಟೇ ಘಾಸಿಯುಂಟುಮಾಡುತ್ತಿಲ್ಲ ಬದಲಾಗಿ ಸಾಮಾಜಿಕ ಸಂರಚನೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ, ಇವರ ಆಳ್ವಿಕೆಯಲ್ಲಿ ರಾಜ್ಯವನ್ನು ದಂಗೆಯ ಬೆಂಕಿಗೆ ಎಸೆದಿದ್ದರು ಎಂದೂ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿ ಕಾರಿದ್ದಾರೆ.

ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ವಿಶ್ವಕರ್ಮ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ರಾಮನ ಹಿತೈಷಿಗಳಾಗದವರು ಎಂದಿಗೂ ನಿಮ್ಮ ಹಿತೈಷಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ ರಾಮ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳುವುದು ಈಗಿನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

Share This Article
Leave a Comment

Leave a Reply

Your email address will not be published. Required fields are marked *