ಲಕ್ನೋ: ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದೆ. ಗೆಲುವಿನ ಪತಾಕೆಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲಾ ಪಕ್ಷಗಳು ಪೈಪೋಟಿ ಶುರು ಮಾಡಿಕೊಂಡಿವೆ. ಆದರೆ ನಿನ್ನೆ ಉತ್ತರಪ್ರದೇಶ ಮುಖ್ಯಮಂತ್ರಿ, ದೆಹಲಿ ಮುಖ್ಯಮಂತ್ರಿ ನಡುವೆ ಟ್ವಿಟ್ಟರ್ ವಾರ್ ಶುರುವಾಗಿದೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ನಾಯಕರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಸೋಮವಾರ ಮಧ್ಯರಾತ್ರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಟ್ವೀಟರ್ ವಾರ್ ನಡೆದಿದೆ.
ಯೋಗಿ ಆದಿತ್ಯನಾಥ್ ಟ್ವಿಟ್ಟರ್: ಕೇಳು ಕೇಜ್ರಿವಾಲ್ ಇಡೀ ಮಾನವೀಯತೆಯು ಕೊರೊನಾ ನೋವಿನಿಂದ ನರಳುತ್ತಿರುವಾಗ, ನೀವು ಉತ್ತರ ಪ್ರದೇಶದ ಕಾರ್ಮಿಕರು ದೆಹಲಿ ತೊರೆಯುವಂತೆ ಒತ್ತಾಯಿಸಿದ್ದೀರಿ. ಮಧ್ಯರಾತ್ರಿಯಲ್ಲಿ ಉತ್ತರ ಪ್ರದೇಶ ಗಡಿಯಲ್ಲಿ ಚಿಕ್ಕ ಮಕ್ಕಳು ಮತ್ತು ಮಹಿಳೆಯರನ್ನು ಅಸಹಾಯಕರನ್ನಾಗಿಸುವಂತಹ ಅಪ್ರಜಾಸತ್ತಾತ್ಮಕ ಮತ್ತು ಅಮಾನವೀಯ ಕೃತ್ಯವನ್ನು ನಿಮ್ಮ ಸರ್ಕಾರ ಮಾಡಿದೆ. ನಿಮ್ಮನ್ನು ಮಾನವ ವಿರೋಧಿ ಎಂದು ಕರೆಯಬಹುದು ಟ್ವೀಟ್ ಮಾಡುವ ಮೂಲಕ ಕೇಜ್ರಿವಾಲ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
सुनो केजरीवाल,
जब पूरी मानवता कोरोना की पीड़ा से कराह रही थी, उस समय आपने यूपी के कामगारों को दिल्ली छोड़ने पर विवश किया।
छोटे बच्चों व महिलाओं तक को आधी रात में यूपी की सीमा पर असहाय छोड़ने जैसा अलोकतांत्रिक व अमानवीय कार्य आपकी सरकार ने किया।
आपको मानवताद्रोही कहें या…
— Yogi Adityanath (@myogiadityanath) February 7, 2022
ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್: ಕೂಡಾ ಸೇಡು ತೀರಿಸಿಕೊಂಡಿದ್ದು, ಕೇಳು ಯೋಗಿ, ಯುಪಿಯ ಜನರ ಮೃತದೇಹಗಳು ನದಿಯಲ್ಲಿ ಹರಿಯುತ್ತಿದ್ದಂತೆಯೇ, ನೀವು ಕೋಟಿಗಟ್ಟಲೆ ಹಣ ವ್ಯಯಿಸಿ, ನಿಮ್ಮ ಸುಳ್ಳು ಚಪ್ಪಾಳೆಗಳ ಜಾಹೀರಾತು ನೀಡುತ್ತಿದ್ದಿರಿ. ನಿನ್ನಂತಹ ಕ್ರೂರಿ ಮತ್ತು ಕ್ರೂರ ಆಡಳಿತಗಾರನನ್ನು ನಾನು ನೋಡಿಲ್ಲ ಎಂದು ಯೋಗಿ ಆದಿತ್ಯನಾಥ್ ಅವರ ಟೀಕೆಗೆ ಕೇಜ್ರಿವಾಲ್ ಕೂಡಾ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್
सुनो योगी,
आप तो रहने ही दो। जिस तरह UP के लोगों की लाशें नदी में बह रहीं थीं और आप करोड़ों रुपए खर्च करके Times मैगज़ीन में अपनी झूठी वाह वाही के विज्ञापन दे रहे थे। आप जैसा निर्दयी और क्रूर शासक मैंने नहीं देखा। https://t.co/qxcs2w60lG
— Arvind Kejriwal (@ArvindKejriwal) February 7, 2022
ಯೋಗಿ ಆದಿತ್ಯನಾಥ್, ಅರವಿಂದ್ ಕೇಜ್ರಿವಾಲ್ ಅವರ ಟ್ವೀಟ್ ಮೂಲಕವಾಗಿ ಒಬ್ಬರಿಗೊಬ್ಬರು ಪ್ರಶ್ನೆ ಮಾಡಿಕೊಂಡಿದ್ದಾರೆ. ತಮ್ಮ ನಿಲುವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಸರ್ಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!