ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು

Public TV
1 Min Read

– ತಿಂಗಳಾದರೂ ಅಧಿಕಾರಿಗಳಿಂದ ಮಾತ್ರ ನಿರ್ಲಕ್ಷ್ಯ

ಮಂಡ್ಯ: ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿರೋದಕ್ಕೆ ಭಕ್ತರು ಆತಂಕಗೊಂಡ ಘಟನೆ ಮೇಲುಕೋಟೆ ಬೆಟ್ಟದ ಯೋಗಾನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಸ್ಥಳ ಮೇಲುಕೋಟೆ. ಅದರಲ್ಲಿಯೂ ಯೋಗಾನರಸಿಂಹ ಸ್ವಾಮಿ ದೇವಾಲಯ ನೂರಾರು ವರ್ಷಗಳ ಪುರಾತನ ದೇವಾಲಯವಾಗಿದೆ. ಎಂದೂ ಬಾಗಿರದಾ ಈ ಪುರಾತನ ದೇವಾಲಯದ ರಾಜಗೋಪುರ ಇಂದು ಭಿನ್ನವಾಗಿದೆ. ಈ ಹಿನ್ನೆಲೆ ಭಕ್ತರು ಇದು ಕೆಡುಕಿನ ಮುನ್ಸೂಚನೆಯೇ ಎಂಬ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

ಕಳಶ ಬಾಗಿರೋದನ್ನ ನೋಡಿ ಭಕ್ತರು ಬೇಸರದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಕ್ತರು ಈ ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯನ್ನು ಹೊಂದಿದ್ದಾರೆ. ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಶ ದರ್ಶನ ಮಹತ್ವದಾಗಿದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದ್ದಾಗಿದೆ. ಶುಭ ಸಂಕೇತದ ಕಳಸ ಬಾಗಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದ್ರೂ ಅಧಿಕಾರಿಗಳು ಇದನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯತೆ ಬಗ್ಗೆ ಮೇಲುಕೋಟೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳು ಜನರ ನಂಬಿಕೆ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದ ಕೆಲವೇ ತಿಂಗಳಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನರಾಗಿದ್ದರು. ಈ ವೇಳೆಯು ಸಹ ಅಧಿಕಾರಿಗಳು ನಿರ್ಲಕ್ಷ್ಯತೆ ಪ್ರದರ್ಶನವಾಗಿತ್ತು. ಈಗ ಯೋಗನರಸಿಂಹ ಸ್ವಾಮಿ ದೇವಾಲಯ ಕಳಶ ಬಾಗಿರುವುದರಿಂದ ಭಕ್ತರಲ್ಲಿ ಆತಂಕ ಮೂಡಿದ್ದು, ಕಳಶ ಮರು ಪ್ರತಿಷ್ಠಾಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ

Share This Article
Leave a Comment

Leave a Reply

Your email address will not be published. Required fields are marked *