ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟ ಯೋಗಪಟು

Public TV
0 Min Read

ಚಾಮರಾಜನಗರ: ಯೋಗಪಟುವೊಬ್ಬರು ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿನಾರಾಯಣ ದೇವಸ್ಥಾನ ಬಡಾವಣೆಯ ನಾಗರಾಜು (78) ಮೃತ ವ್ಯಕ್ತಿ.

ನಾಗರಾಜು ತೀರ್ಥ ಸ್ನಾನ ಮಾಡಲೆಂದು ನದಿಗೆ ಇಳಿದಿದ್ದರು. ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲೇ ಇದ್ದರು. ಜೊತೆಗೆ ಬಂದಿದ್ದವರು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.

ಯೋಗ ಮಾಡುತ್ತಲೇ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

Share This Article