ಬೆಂಗಳೂರಿಗೆ ಬಿಜೆಪಿಯ ಯಾವೊಬ್ಬ ನಾಯಕ 10 ರೂ. ಅನುದಾನ ತಂದಿಲ್ಲ: ಡಿಕೆಶಿ ಆಕ್ರೋಶ

Public TV
1 Min Read

ಬೆಂಗಳೂರು: ಕರ್ನಾಟಕಕ್ಕೆ (Karnataka) ಮತ್ತು ಬೆಂಗಳೂರಿಗೆ (Bengaluru) ಬಿಜೆಪಿ ಯಾವೊಬ್ಬ ಸಂಸದ 10 ರೂ. ಅನುದಾನ ಕೊಟ್ಟಿಲ್ಲ ಎಂದು ಡಿಕೆ ಶಿವಕುಮಾರ್‌ (DK Shivakumar) ಸಿಟ್ಟು ಹೊರಹಾಕಿದ್ದಾರೆ.

ಇಂದು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸಂಸದರಿಗೆ ನಾಚಿಕೆಯಾಬೇಕು.ಒಬ್ಬನೇ ಒಬ್ಬ ಬಿಜೆಪಿ ಎಂಪಿ 10 ರೂಪಾಯಿ ಅನುದಾನ ಕೊಡಿಸಿಲ್ಲ. ಬಿಜೆಪಿ ಅವರ ಸಾಧನೆ ಏನಿಲ್ಲ ಎಂದು ಹೇಳಿದರು.

ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚು. 80% ಅನುದಾನವನ್ನು ನಾವು ಕೊಟ್ಟಿದ್ದೇವೆ. ಬಿಜೆಪಿಯವರು ನಾವೇ ಮೆಟ್ರೋ ಮಾಡಿದ್ದಾರೆ ಎಂದು ಶೋ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ ಯೋಜನೆಗೆ ನಾವು 80% ಅನುದಾನ ನೀಡಿದರೆ ಕೇಂದ್ರ ಸರ್ಕಾರ 20% ಅನುದಾನ ನೀಡಿದೆ. ನಿಜವಾಗಿ ಅವರು 50% ಅನುದಾನ ನೀಡಬೇಕಿತ್ತು ಸಿಟ್ಟು ಹೊರಹಾಕಿದರು.  ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ Live Coverage

 

 

ನರೇಗಾ ಹಣ ಒಂದೇ ಒಂದು ಪೈಸೆ ಕೊಟ್ಟಿಲ್ಲ. ಕೇಂದ್ರದ ಅನುದಾನ ಸಮರ್ಪಕವಾಗಿ ಬಂದಿಲ್ಲ. ಆದರೂ ಪ್ರಧಾನಿ ಅವರಿಗೆ ಗೌರವ ಕೊಡುತ್ತಿದ್ದೇವೆ. ಬೆಂಗಳೂರನ್ನ ಬೇರೆ ಥರಾ ನೋಡಬೇಡಿ. ಬೆಂಗಳೂರಿಗೆ ನ್ಯಾಷನಲ್ ಕ್ಯಾಪಿಟಲ್ 1 ಲಕ್ಷ ಕೋಟಿ ರೂ. ಕೊಡಬೇಕು, ಅಹಮದಾಬಾದ್‌ಗೆ ಹೇಗೆ ಪಾಲು ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ನಾನು ರಾಜಕಾರಣ ಮಾಡಲು ಹೋಗುವುದಿಲ್ಲ ಎಂದರು.

ಮೆಟ್ರೋ ಭೂಸ್ವಾಧೀನ ನಾವೇ ಮಾಡಿದ್ದೇವೆ. ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ನಿರ್ಮಾಣವಾಗಿದೆ. ಪ್ರತಿ ವರ್ಷ ಬೆಂಗಳೂರಿಗೆ 1 ಲಕ್ಷ ಜನ ಹೊಸದಾಗಿ ಬರುತ್ತಿದ್ದಾರೆ. ತೆರಿಗೆ ಉತ್ತಮವಾಗಿ ಸಂಗ್ರಹವಾಗುತ್ತಿರುವ ಕಾರಣ ನಾವು ಎಲ್ಲರಿಗೂ ಅನುಕೂಲವಾಗಲಿ ಎಂದು ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ ಎಂದು ಹೇಳಿದರು.

Share This Article