ಇದೇ ಭಾನುವಾರ ಹಳದಿ ಮಾರ್ಗದ ಮೆಟ್ರೋ ಸೇವೆ ಒಂದು ಗಂಟೆ ಲೇಟ್‌

1 Min Read

ಬೆಂಗಳೂರು: ಇದೇ ಭಾನುವಾರ (ಡಿ.21) ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Yellow Line) ಮೆಟ್ರೋ ಸೇವೆಗಳು ಒಂದು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ಮಾಹಿತಿ ನೀಡಿದೆ.

ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ತುರ್ತು ವ್ಯವಸ್ಥಾ ನಿರ್ವಹಣೆ, ನವೀಕರಣ ಕಾರ್ಯಗಳ ಹಿನ್ನೆಲೆ ಇದೇ ಡಿ.21 (ಭಾನುವಾರ) ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಗಲಿವೆ. ಈ ಹಿನ್ನೆಲೆ ಹಳದಿ ಮಾರ್ಗದಲ್ಲಿ ಮೊದಲ ರೈಲು ಸೇವೆ ಬೆಳಿಗ್ಗೆ 7.00 ಗಂಟೆಯ ಬದಲಾಗಿ ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭವಾಗಲಿದ್ದು, ಬಳಿಕ ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯಾಚರಿಸಲಿದೆ. ಈ ಬದಲಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾಂಡ್ಯ ಸ್ಫೋಟಕ ಫಿಫ್ಟಿ – ಭಾರತಕ್ಕೆ 30 ರನ್‌ಗಳ ಜಯ

ಇನ್ನೂ ಹಳದಿ ಮಾರ್ಗದ ಹೊರತಾಗಿ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ.

ಪ್ರಯಾಣಿಕರಿಗೆ ಉಂಟಾಗುವ ಯಾವುದೇ ಅಸೌಕರ್ಯಕ್ಕೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಂದ ನಿರಂತರ ಸಹಕಾರ ಮತ್ತು ಸಹನೆಯನ್ನು ಕೋರುತ್ತದೆ ಎಂದು ತಿಳಿಸಿದೆ.ಇದನ್ನೂ ಓದಿ: ಆನೆಗೊಂದಿ ಸೇತುವೆ ಕುಸಿತ ಕೇಸ್ – ರಾಜ್ಯ ಸರ್ಕಾರ ಬಡ್ಡಿ ಸಹಿತ 5.63 ಕೋಟಿ ಪರಿಹಾರ ನೀಡಬೇಕಿದ್ದ ಆದೇಶ ರದ್ದು: ಹೈಕೋರ್ಟ್‌

Share This Article