ಈಚೆಗಷ್ಟೇ ಆರಂಭವಾದ ಯೆಲ್ಲೋ ಲೈನ್‌ ಮೆಟ್ರೋ – ರೈಲು ಮಿಸ್‌ ಮಾಡಿಕೊಂಡ ಪ್ರಯಾಣಿಕನಿಗೆ ಬಿತ್ತು ದಂಡ!

By
1 Min Read

– ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇರುವಂತಿಲ್ಲ

ಬೆಂಗಳೂರು: ಆ.10 ರಿಂದ ಆರಂಭವಾಗಿರುವ ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಕ್ಕೆ ಬಂದವನಿಗೆ ದಂಡದ ಅನುಭವವಾಗಿದೆ. ಒಂದು ರೈಲು ಮಿಸ್ ಮಾಡಿಕೊಂಡಿದ್ದಕ್ಕೆ 50 ರೂ. ದಂಡ ಕಟ್ಟಿದ ಘಟನೆ ಸಿಲ್ಕ್ ಬೋರ್ಡ್‌ನಲ್ಲಿ ನಡೆದಿದೆ.

ಒಂದು ಮೆಟ್ರೋ ಸ್ಟೇಷನ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾಯುವಂತಿಲ್ಲ. ಈ ನಿಯಮ ಯೆಲ್ಲೋ ಲೈನ್‌ಗೂ ಅನ್ವಯಿಸಿರುವುದು ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿದೆ. ಯೆಲ್ಲೋ ಲೈನ್‌ ಸಿಲ್ಕ್ ಬೋರ್ಡ್ ಸ್ಟೇಷನ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿರಿ ಅಂತಾ ಪ್ರಯಾಣಿಕನೊಬ್ಬನಿಗೆ 50 ರೂ. ದಂಡ ಹಾಕಲಾಗಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್‌ಗೆ ಬಿಗ್‌ ರಿಲೀಫ್‌

ಸಿಲ್ಕ್ ಬೋರ್ಡ್ ಟು ಆರ್‌ವಿ ರಸ್ತೆಗೆ ಹೋಗುವ ಪ್ಲ್ಯಾನ್‌ನಲ್ಲಿದ್ದ ಪ್ರಯಾಣಿಕ, ಟಿಕೆಟ್ ಪಡೆದು ಒಳಗೆ ಹೋಗಿದ್ದಾನೆ. ರೈಲು ಬರುವವರೆಗೂ ಕಾದಿದ್ದಾನೆ. ಆದರೆ, ಜನ ಹೆಚ್ಚು ಇದ್ದಿದ್ದರಿಂದ ಬಂದ ರೈಲು ಹತ್ತಲು ಸಾಧ್ಯವಾಗಿಲ್ಲ. ಬಳಿಕ ಮುಂದಿನ ರೈಲಿಗೆ ಇಪ್ಪತೈದು ನಿಮಿಷ ಕಾಯಲು ಆಗಲ್ಲ ಅಂತ ವಾಪಸ್ ಬರಲು ತೀರ್ಮಾನಿಸಿದ್ದ. ಆದರೆ, ಹೊರಗೆ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಸ್ಟೇಷನ್‌ನಲ್ಲಿದ್ರಿ ಅಂತ 50 ರೂ. ದಂಡ ವಿಧಿಸಲಾಗಿದೆ.

ಒಂದು ಟ್ರೈನ್ ಮಿಸ್ ಆದರೆ ಇನ್ನು ಇಪ್ಪತೈದು ನಿಮಿಷ ಕಾಯಬೇಕು. ಇಲ್ಲ ಹೊರಗೆ ಹೋಗ್ತೀವಿ ಅಂದ್ರೆ 50 ರೂ. ದಂಡ ಪಾವತಿಸಬೇಕು. ಕೊನೆಗೂ ದಂಡ ಪಾವತಿಸಿ ಪ್ರಯಾಣಿಕ ಹೊರಗೆ ಬಂದಿದ್ದಾನೆ. ಇದನ್ನೂ ಓದಿ: 2047ಕ್ಕೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಹೆಚ್‌ಡಿಕೆ

Share This Article