ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

Public TV
1 Min Read

– ಆರ್‌ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ

ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಜನರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗ (Yellow Line) ಇಂದಿನಿಂದ ಕಾರ್ಯಾರಂಭಿಸಿದೆ. ಭಾನುವಾರ (ಆ.10) ಪ್ರಧಾನಿ ಮೋದಿಯವರಿಂದ (PM Modi) ಚಾಲನೆಯಾದ ಬಳಿಕ ಸೋಮವಾರ (ಆ.11) ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

ಬೆಂಗಳೂರಿನ ಟ್ರಾಫಿಕ್ ಜಂಗುಳಿಗೆ ಕೊಂಚ ಬ್ರೇಕ್ ಹಾಕಿರೋ ರೈಲುಗಾಡಿಯೇ ನಮ್ಮ ಮೆಟ್ರೋ. ಇದೀಗ ಸುಗಮ ಸಂಚಾರದ ಮತ್ತೊಂದು ಕನಸು ನನಸಾಗಿದೆ. ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ 6:30ರಿಂದಲೇ ಮೊದಲ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಿದೆ.ಇದನ್ನೂ ಓದಿ: ಮೆಟ್ರೋ ಕ್ರೆಡಿಟ್‌ ವಾರ್‌ – ಕೇಂದ್ರದ್ದೆಷ್ಟು? ರಾಜ್ಯದ್ದೆಷ್ಟು?

ಬೆಳಿಗ್ಗೆ 6:30ಕ್ಕೆ ಬೊಮ್ಮಸಂದ್ರದಿಂದ ಮೊದಲ ಮೆಟ್ರೋ ಪ್ರಾರಂಭವಾದರೆ, ಬೆಳಿಗ್ಗೆ 7:10ಕ್ಕೆ ಆರ್‌ವಿ ರಸ್ತೆಯಿಂದ ಮೊದಲ ಮೆಟ್ರೋ ಆರಂಭವಾಗಿದೆ. ಪ್ರತಿ 25 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಆರ್‌ವಿ ರಸ್ತೆ ಟು ಬೊಮ್ಮಸಂದ್ರದವರೆಗೆ ಸಂಚರಿಸಲಿವೆ. ರಾತ್ರಿ 10:42ಕ್ಕೆ ಬೊಮ್ಮಸಂದ್ರದಿಂದ ಹಾಗೂ ರಾತ್ರಿ 11:55ಕ್ಕೆ ಆರ್‌ವಿ ರಸ್ತೆಯಿಂದ ಕೊನೆಯ ರೈಲು ಸಂಚರಿಸಲಿದೆ. ಇನ್ನೂ ಪ್ರತಿದಿನ ರಾತ್ರಿ 10 ಗಂಟೆ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

ಪ್ರತಿ ಭಾನುವಾರದಂದು ಬೆಳಿಗ್ಗೆ 6:30ರ ಬದಲಾಗಿ 7ಕ್ಕೆ ಹಳದಿ ಮಾರ್ಗದ ಮೆಟ್ರೋ ಪ್ರಾರಂಭವಾಗಲಿದ್ದು, ಈ ನಿಲ್ದಾಣಗಳ ನಡುವಿನ ಪ್ರಯಾಣ ದರ 60 ರೂ. ನಿಗದಿಪಡಿಸಲಾಗಿದೆ.

ಐಪೋನ್ ಬಳಸುವ ಗ್ರಾಹಕರು ಆಪಲ್ ಸ್ಟೋರ್‌ನಿಂದ ಮೆಟ್ರೋ ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಕ್ಯೂಆರ್ ಟಿಕೆಟ್ ಖರೀದಿಸಲು ಅವಕಾಶವಿದೆ. ಒಟ್ಟು 16 ಮೆಟ್ರೋ ನಿಲ್ದಾಣಗಳು ಈ ಮಾರ್ಗದ ಅಡಿಯಲ್ಲಿವೆ. ಇನ್ನೂ ಸದ್ಯಕ್ಕೆ ಮೂರು ರೈಲು ಸೆಟ್‌ಗಳು ಸಂಚರಿಸುತ್ತಿದ್ದು, ಹೆಚ್ಚು ರೈಲು ಸೆಟ್‌ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದಂತೆ ರೈಲು ಸಂಚಾರದ ಅವಧಿ ಹೆಚ್ಚಳ ಮಾಡಲಾಗುವುದೆಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಒಟ್ಟಿನಲ್ಲಿ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಭಾಗದ ಟ್ರಾಫಿಕ್ ಕಿರಿಕಿರಿಗೆ ಈ ಯೆಲ್ಲೋ ಲೈನ್ ಮೆಟ್ರೋ ಬ್ರೇಕ್ ಹಾಕುವ ನಿರೀಕ್ಷೆಯಿದೆ.ಇದನ್ನೂ ಓದಿ: ಶಕ್ತಿ ಯೋಜನೆ ಉಲ್ಲೇಖಿಸಿ ಮೋದಿ ಸಿಡಿಸಿದ ಚಟಾಕಿಗೆ ನಕ್ಕಿದ ಸಿಎಂ, ಡಿಸಿಎಂ

 

Share This Article