– ತಪ್ಪಿಸಿಕೊಳ್ಳಲು ಯತ್ನಿಸಿದಾಕೆ ಬಾತ್ ರೂಮಲ್ಲಿ ಉಸಿರುಗಟ್ಟಿ ಸಾವು
– ಒಂದು ವಾರದಿಂದಲೂ ಲಾಡ್ಜ್‌ನಲ್ಲಿ ಉಳಿದಿದ್ದ ಬಗ್ಗೆ ಮಾಹಿತಿ
ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂಟೌನ್‌ನ (Yelahanka New Town) ಲಾಡ್ಜ್ ನಲ್ಲಿ ಬೆಂಕಿ ಅವಘಡ ಉಂಟಾಗಿ ಗದಗ ಮೂಲದ ರಮೇಶ್ ಮತ್ತು ಕಾವೇರಿ ಅನ್ನೋರು ಸಾವನ್ನಪ್ಪಿದ್ದಾರೆ.
ಇಂದು ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಲಾಡ್ಜ್ ನಲ್ಲಿ ಬೆಂಕಿ (Yelahanka Lodge Fire) ಹೊತ್ತಿಕೊಂಡ ತಕ್ಷಣ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆದ ವೇಳೆ ರಮೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದು, ಯುವತಿ ಕಾವೇರಿ ಉಸಿರುಗಟ್ಡಿ ಸಾವನ್ನಪ್ಪಿರೋದು ಗೊತ್ತಾಗಿದೆ. ಇದನ್ನೂ ಓದಿ: ಯಲಹಂಕ ಲಾಡ್ಜ್‌ನಲ್ಲಿ ಅಗ್ನಿ ದುರಂತ – ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳ ಆತ್ಮಹತ್ಯೆ
ಇವರಿಬ್ಬರು ಪ್ರೇಮಿಗಳು ಅಂತ ಹೇಳಲಾಗ್ತಿದೆ. ಇಬ್ಬರ ನಡುವೆ ಜಗಳ ನಡೆದು ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಪೆಟ್ರೋಲ್ ಸುರಿಯೋಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆಗ ರಮೇಶ್ ತಾನು ಬೆಂಕಿ ಹಚ್ಚಿಕೊಂಡು ಬಾತ್ ರೂಂ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದಲೇ ಲಾಡ್ಜ್ ಪೂರ್ತಿ ಬೆಂಕಿ ಆವರಿಸಿಕೊಂಡಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆ ನಾ ಅಥವಾ ಬೆಂಕಿಯ ಅವಘಡ ದಿಂದ ನಡೆದಿದ್ಯಾ ಅನ್ನೋದು ಗೊತ್ತಾಗಬೇಕಿದೆ. ಇದನ್ನೂ ಓದಿ: ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ – 51 ಕೋಟಿ ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ವಶ
ಯುವಕ-ಯುವತಿ ಒಂದು ವಾರದಿಂದ ಲಾಡ್ಜ್‌ನಲ್ಲಿದ್ದರು ಎಂಬ ಮಾಹಿತಿ ಕೂಡ ಇದೆ. ಇಂದು 3 ಗಂಟೆ ಸುಮಾರಿಗೆ ಯುವಕ ರಮೇಶ್ ಹೊರಗಿನಿಂದ ಪೆಟ್ರೋಲ್ ತೆಗೆದುಕೊಂಡು ಬಂದಿದ್ದಾನೆ. ರೂಮ್ ಒಳಗೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಹಾಕಲು ಮುಂದಾಗಿದ್ದಾನೆ ಎಂದು ಹೇಳಲಾಗ್ತಿದೆ. ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬರಲಿದೆ. ಇದನ್ನೂ ಓದಿ: ಜಾತಿಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ – ಕಾಲಿಗೆ ಗಂಭೀರ ಗಾಯ