ಯಡಿಯೂರಪ್ಪರಿಂದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಚಾಲನೆ

Public TV
1 Min Read

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ (Yediyurappa) ಅವರು ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ (Bharath Brand Rice) ವಿತರಣೆಗೆ ಇಂದು ಮಧ್ಯಾಹ್ನ 4 ಗಂಟೆಗೆ ಚಾಲನೆ ನೀಡಿದ್ದಾರೆ.

ಭಾರತ್  ಬ್ರ್ಯಾಂಡ್ ಅಕ್ಕಿ ವಿತರಣೆಗೆ ದೆಹಲಿಯಲ್ಲಿ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಇಂದು ಚಾಲನೆ ನೀಡಿದ್ದು, ಈ ಉದ್ಘಾಟನೆಯ ನಂತರ ಕರ್ನಾಟಕದಲ್ಲಿ ಮಧ್ಯಾಹ್ನ 4 ಗಂಟೆಗೆ ಮಾಜಿ ಸಿಎಂ ಯಡಿಯೂರಪ್ಪ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ನಿರ್ಧರಿಸಿದೆ. ನಗರದ ಯಶವಂತಪುರದ ಎನ್‌ಸಿಸಿಎಫ್ ಗೋಡೌನ್‌ನಿಂದ ಸುಮಾರು 100 ಮೊಬೈಲ್ ವ್ಯಾನ್‌ಗಳ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಚರಿಸಿ ಅಕ್ಕಿ ವಿತರಣೆ ನಡೆಯಲಿದೆ. 5 ಹಾಗೂ 10 ಕೆ.ಜಿ ಬ್ಯಾಗ್‌ಗಳಲ್ಲಿ ಅಕ್ಕಿ ಸಿಗಲಿದೆ. ಇದನ್ನೂ ಓದಿ: ಕೇಂದ್ರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಮಂಡನೆ

  

ಇಂದು ಬೆಂಗಳೂರಲ್ಲಿ ಮಾತ್ರ ಅಕ್ಕಿ ಸಿಗಲಿದ್ದು, ನಾಳೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಕಿ ವಿತರಣೆಯಾಗಲಿದೆ. ಬಿಗ್ ಬಾಸ್ಕೆಟ್, ಫ್ಲಿಪ್‌ಕಾರ್ಟ್ ರಿಲಯನ್ಸ್ ಸ್ಟೋರ್ಸ್ ಮತ್ತು ಸ್ಟಾರ್ ಹೈಪರ್ ಬಜಾರ್‌ಗಳ ಜೊತೆಗೆ ಸಹ ಭಾರತ್ ಬ್ರಾಂಡ್ ಒಪ್ಪಂದ ನಡೆದಿದೆ. ಇದನ್ನೂ ಓದಿ:   ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ

Share This Article