ಬಿಎಸ್‍ವೈ ಹಾಗೂ ನಾನು ಎರಡು ದೇಹ ಒಂದೇ ಮನಸ್ಸು: ಈಶ್ವರಪ್ಪ

Public TV
1 Min Read

ಕೊಪ್ಪಳ: ಬಿಎಸ್ ಯಡಿಯೂರಪ್ಪ ಹಾಗೂ ನಾನು ಎರಡು ದೇಹ ಒಂದೇ ಮನಸ್ಸು. ಈಗಲೂ ನಾವು ಹೀಗಿಯೇ ಇದ್ದೇವೆ ಎಂದು ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಭಿನ್ನಮತ ಮುಗಿಯುತ್ತಾ ಬಂದಿದ್ದು, ಇದೀಗ ಕಾಂಗ್ರೆಸ್‍ನಲ್ಲಿ ಭಿನ್ನ ಮತ ಶುರುವಾಗಿದೆ. ಮುಂದಿನ ಚುನಾವಣೆ ನಾಯಕತ್ವದ ಬಗ್ಗೆ ಕಾಂಗ್ರೆಸ್ ನಲ್ಲಿ ಗೊಂದಲವಿದೆ ಎಂದು ಹೇಳಿದರು.

ನಾ ಹಿಂದುಳಿದ, ದಲಿತರಿಗೆ ದ್ರೋಹ ಮಾಡೋಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ಒಂದು ನಿಲುವು ಅಧಿಕಾರಕ್ಕೆ ಬಂದ ಮೇಲೆ ಮತ್ತೊಂದು ನಿಲುವು ತೋರಿಸಿದ್ದಾರೆ. ಪಕ್ಷ ನಿಷ್ಠೆ ಬಗ್ಗೆ ಸಿಎಂ ಸಿದ್ದರಾಮಯ್ಯ ನನಗೆ ಪಾಠಮಾಡಬೇಕಿಲ್ಲ. ಸಿದ್ದರಾಮಯ್ಯ ಎಷ್ಟು ಪಕ್ಷ ಬಿಟ್ಟು ಬಂದಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿ ಟಾಂಗ್ ನೀಡಿದರು.

ನಾನು ಹಿಂದುಳಿದ ದಲಿತರ ಪರವಾಗಿ ಹೋರಾಡುತ್ತೇನೆ. ನಾನೂ ಯಾವಾಗಲೂ ನೇರನೇರಾ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೂ ನನಗೂ ಸಂಬಂಧವಿಲ್ಲ ಅಂತಾ ಹೇಳಿದ್ಮೇಲೆ ನಾನು ಬ್ರಿಗೇಡ್ ವಿಚಾರದಲ್ಲಿ ಉಲ್ಟಾ ಹೊಡೆದಿಲ್ಲ ಅಂತಾ ಹೇಳಿದ್ರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಲ್ಲಂತ ಕಾರ್ಯಕರ್ತರು ಹೇಳ್ತಿದ್ದಾರೆ. ಆದ್ರೆ ಅವರು ಕರೆದಲ್ಲಿ ನಾನು ಹೋಗಿದ್ದೆ. ಹಾಗಾಂತ ನಾನು ಅಲ್ಲಿಯ ಬ್ರಿಗೇಡ್ ಸದಸ್ಯನೂ ಅಲ್ಲ. ಪದಾಧಿಕಾರಿಯೂ ಅಲ್ಲ. ರಾಯಣ್ಣ ಬ್ರಿಗೇಡ್ ಜೊತೆ ಇರುತ್ತೇನೆ ಅಂತಾ ಹೇಳಿದರು.

ಜಂತಕಲ್ ಮೈನಿಂಗ್ ಅಕ್ರಮ ವಿಚಾರ ದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡಿ ಈ ಪ್ರಕರಣ ಮುಚ್ಚಿ ಹಾಕಬಾರದು. ಐಎಎಸ್ ಅಧಿಕಾರಿ ಗಂಗಾರಾಮ ಬಡೇರಿಯಾರನ್ನ ತಕ್ಷಣ ಸಸ್ಪೆಂಡ್ ಮಾಡಬೇಕು. ಕುಮಾರಸ್ವಾಮಿ, ಧರಂಸಿಂಗ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಅನುಮಾನವಿದೆ. ಸಿಎಂ ಸಿದ್ದರಾಮಯ್ಯ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *