ಮತದಾರನ ಮೇಲೆ ಹಲ್ಲೆ ಮಾಡಿ ಕೆನ್ನೆಗೆ ಏಟು ತಿಂದಿದ್ದ ಶಾಸಕ ಅನ್ನಾಬತ್ತುನಿ ಶಿವಕುಮಾರ್‌ಗೆ ಹೀನಾಯ ಸೋಲು

Public TV
1 Min Read

ಹೈದರಾಬಾದ್‌: ಮತದಾನದ ವೇಳೆ ಕ್ಯೂನಲ್ಲಿ ಬರುವಂತೆ ಹೇಳಿದ್ದಕ್ಕೆ ಮತದಾರನ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಹಾಗೂ ವೈಸಿಪಿ ಅಭ್ಯರ್ಥಿ ಶಿವಕುಮಾರ್ ಅವರು ಭಾರೀ ಮತಗಳ ಸೋಲು ಕಂಡಿದ್ದಾರೆ. ಹಾಲಿ ಶಾಸಕರನ್ನು 48,112 ಮತಗಳ ಅಂತರದಿಂದ ಜನಸೇನೆಯ ಪಕ್ಷದ ಅಭ್ಯರ್ಥಿ ನಾದೆಂಡಲಮನೋಹರ್ ಸೋಲಿಸಿದ್ದಾರೆ.

ಕ್ಯೂನಲ್ಲಿ ಬಂದು ಮತ ಹಾಕಲು ಹೇಳಿದ್ದಕ್ಕೆ ವೈಎಸ್‍ಆರ್ ಕಾಂಗ್ರೆಸ್‍ನ (YSR Congress) ಶಾಸಕ ಅನ್ನಾಬತ್ತುನಿ ಶಿವಕುಮಾರ್ (Annabathuni Sivakumar) ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರ ಪ್ರದೇಶದ (Andhra Pradesh) ತೆನಾಲಿ ಮತಗಟ್ಟೆಯಲ್ಲಿ ನಡೆದಿತ್ತು. ಈ ವೇಳೆ ಮತದಾರ ಸಹ ಶಾಸಕರ ಕೆನ್ನೆಗೆ ಭಾರಿಸಿದ್ದರು. ಇದರಿಂದ ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲಿಸರು ಮತದಾರನನ್ನು ರಕ್ಷಿಸಿದ್ದರು.

ಶಾಸಕರು ಹಲ್ಲೆ ನಡೆಸಿದ್ದ ವೀಡಿಯೋ ತೆಲುಗುದೇಶಂ ಪಾರ್ಟಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಮತದಾರನ ಮೇಲೆ ಹಲ್ಲೆ ಮಾಡಿದ ವೈಸಿಪಿ ಶಾಸಕನಿಗೆ ತಿರುಗಿ ಹೊಡೆದ ಸಾಮಾನ್ಯ ಮತದಾರ ಹಾಗೂ ಪ್ರಜೆಗಳ ಆಕ್ರೋಶದಲ್ಲಿ ವೈಎಸ್‍ಆರ್ ಪಕ್ಷ ಕೊಚ್ಚಿ ಹೋಗುತ್ತಿದೆ ಎಂದು ಪೋಸ್ಟ್ ಮಾಡಿತ್ತು.

Share This Article