ಈ ಪ್ರತಾಪ್ ಸಿಂಹ ಯಾರ್ರೀ, ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಯತೀಂದ್ರ ಸಿದ್ದರಾಮಯ್ಯ

Public TV
2 Min Read

ರಾಯಚೂರು: ಈ ಪ್ರತಾಪ್ ಸಿಂಹ (Pratap Simha) ಯಾರ್ರೀ, ಆತ ರಾಜಕೀಯದಲ್ಲಿ ಪ್ರಸಿದ್ಧ ಆಗಿರಬೇಕು. ಹಾಗಾಗಿ, ಸುಮ್ನೆ ಸಾಕ್ಷಿ, ಆಧಾರ ಇಲ್ದೆ ಆರೋಪ ಮಾಡ್ತಿರ್ತಾರೆ. ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah), ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಗಳಿಗೆ ಟಾಂಗ್ ಕೊಟ್ಟರು.

ರಾಯಚೂರಿನಲ್ಲಿ ಮಾತನಾಡಿದ ಯತೀಂದ್ರ, ಪ್ರತಾಪ್ ಸಿಂಹ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಕೌಂಟರ್ ಕೊಟ್ಟಿದ್ದಾರೆ. ಅವರ ಪಕ್ಷವೇ ಅವರನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ನಾವ್ಯಾಕೆ ಗಂಭೀರವಾಗಿ ತೆಗೆದುಕೊಳ್ಬೇಕು ಎಂದರು. ಇದನ್ನೂ ಓದಿ: ಮೈಸೂರಿನ ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಆರೋಪ

ಸಿಎಂ ಔತಣಕೂಟದಲ್ಲಿ ಬಿಹಾರ ಎಲೆಕ್ಷನ್‌ಗೆ ಯಾರ‍್ಯಾರು ಎಷ್ಟು ಹಣ ನೀಡಬೇಕು ಅಂತ ಚರ್ಚೆ ಮಾಡಿದ್ದಾರೆಂಬ ಆರ್‌.ಅಶೋಕ್‌ ಆರೋಪ ಕುರಿತು ಮಾತನಾಡಿ, ನಮ್ಮ ಪಕ್ಷದಲ್ಲಿ ನಡೆಯೋದು ಅವರಿಗೆ ಹೇಗ್ರಿ ಗೊತ್ತಾಗತ್ತೆ. ಅವರು ಏನಾದ್ರು ಹೇಳ್ತಾರೆ, ಅವರು ಹೇಳೋದು ನಿಜ ಆಗುತ್ತಾ? ಸಿಎಂ ಆವಾಗ ಆವಾಗ ಔತಣಕೂಟ ಕರೆಯುತ್ತಿರುತ್ತಾರೆ ಎಂದು ತಿಳಿಸಿದರು.

ಈಗಿನ ರಾಜಕೀಯ ಸ್ಥಿತಿಗತಿ ಏನಿದೆ? ಅವರವರ ಇಲಾಖೆ ಹೇಗೆ ನಡೀತಿದೆ. ಸಮಸ್ಯೆ ಇದೆಯಾ ಅನ್ನೋದನ್ನ ಕೇಳಿ. ಬಿಹಾರ್ ಎಲೆಕ್ಷನ್ ಬಗ್ಗೆಯೂ ಚರ್ಚೆ ಮಾಡ್ತಾರೆ ಎಂದರು. ಎಲ್ಲಿವರೆಗೂ ಸಿದ್ದರಾಮಯ್ಯ ಅವರು ಸಿಎಂ ಆಗಿರ್ತಾರೋ, ಅಲ್ಲಿವರೆಗೂ ಅವರ ಸಂಪುಟದಲ್ಲಿ ನನ್ನ ಮಂತ್ರಿ ಮಾಡಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನನ್ನ ಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆ ಬರಲ್ಲ ಅಂತ ಹೇಳಿದರು. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

ನವೆಂಬರ್ ಕ್ರಾಂತಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರ‌ವಾಗಿ ಮಾತನಾಡಿ, ನಿಜವಾಗ್ಲೂ ಮಾತುಕತೆ ಏನು ನಡೆದಿದೆ ಯಾರಿಗೂ ಗೊತ್ತಿಲ್ಲ. ಎಲ್ಲರೂ ಊಹಾಪೋಹದ ಆಧಾರದಲ್ಲಿ ಹೇಳ್ತಿರ್ತಾರೆ. ನನಗೆ ಗೊತ್ತಿರುವ ಹಾಗೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಪದವಿಗೆ ಅರ್ಹರು ನಮ್ಮ ಪಕ್ಷದಲ್ಲಿ ಬೇಕಾದಷ್ಟು ಜನ ಇದ್ದಾರೆ. ಹಾಗಾಗಿ, ಆಗಾಗ ಕ್ಲೇಮ್ ಮಾಡ್ತಿರ್ತಾರೆ, ಅದರಲ್ಲೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article