ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? – ಸಂಸದ ಅನಂತಕುಮಾರ್‌ ವಿರುದ್ಧ ಯತೀಂದ್ರ ಗುಡುಗು

Public TV
2 Min Read

ಗದಗ: ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? ಕರ್ನಾಟಕ ಜನರು ಕಟ್ಟಿದ ತೆರಿಗೆ ಹಣ ಅದು ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ (Yathindra Siddaramaiah), ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಗುಡುಗಿದ್ದಾರೆ.

ʻಕೇಂದ್ರ ಸರ್ಕಾರದ ಹಣ ಅವರಪ್ಪನ ಮನೆ ಆಸ್ತೀನಾ?ʼ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಅನಂತಕುಮಾರ್‌ ಹೆಗಡೆ (AnanthKumar Hegde) ವಿರುದ್ಧ ಯತೀಂದ್ರ ಹರಿಹಾಯ್ದಿದ್ದಾರೆ. ಕರ್ನಾಟಕದ ಜನರು ಕಟ್ಟಿದ ತೆರಿಗೆ ಹಣ ಅದು, ಕೇಂದ್ರ ಸರ್ಕಾರ ಎಲ್ಲರಿಗೂ‌ ನ್ಯಾಯವಾಗಿ ಹಂಚಿಕೆ ಮಾಡಲಿ ಅಂತ ಕೇಳ್ತಿದ್ದೇವೆ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಿ, ನಾವು ಬೇಡ ಅನ್ನೊದಿಲ್ಲ. ಆದ್ರೆ ನಮಗೆ ಅನ್ಯಾಯ ಆಗ್ತಿದೆ, ಅದನ್ನ ಸರಿಪಡಿಸಿಕೊಡಿ. ನಾವು 1 ರೂಪಾಯಿ ಕೊಟ್ರೆ, ನಮಗೆ 12 ಅಥವಾ 13 ಪೈಸೆ ಅಷ್ಟೇ ಬರ್ತಿದೆ, 25 ಪೈಸೆಯನ್ನಾದ್ರೂ ಕೊಡಿ ಅಂತ ಕೇಳ್ತಿದ್ದೇವೆ ಅಂತ ಹೇಳಿದ್ದಾರೆ.

ಅಲ್ಲದೇ ಹಿಂದೂ ದೇವಾಲಯಗಳ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಸುಳ್ಳು ಆರೋಪ ಮಾಡ್ತಿದ್ದಾರೆ. ಅದು ಫೇಕ್ ನ್ಯೂಸ್ ಅಂತ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ಫೇಸ್ಬುಕ್, ಎಕ್ಸ್‌ ಖಾತೆಗಳಲ್ಲಿ ಈ ಬಗ್ಗೆ ಸಂದೇಶ ಹಂಚಿಕೊಂಡಿದ್ದಾರೆ. ದೇವಾಲಯಗಳ ಹಣ ದೇವಾಲಯಗಳಿಗೇ ಉಪಯೋಗಿಸುತ್ತೇವೆ. ಬೇರೆ ಯಾವ ಸಂಸ್ಥೆಗೆ ಉಪಯೋಗಿಸುವುದಿಲ್ಲ ಅಂತ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂತಹವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ದನ್ನೂ ಓದಿ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

ವಿಧಾನ ಪರಿಷತ್ ನಲ್ಲಿ ಬಹುಮತ ಇರಲಿಲ್ಲ. ಹಾಗಾಗಿ ಧಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರ ಆಗಲಿಲ್ಲ. ಸಿ-ದರ್ಜೆ ದೇವಾಲಯಗಳಿಗೆ ಹೆಚ್ಚಿನ ಹಣ ಬರಬೇಕು. ಯಾವ ದೇವಸ್ಥಾನದಲ್ಲಿ ಆದಾಯ ಹೆಚ್ಚಿರುತ್ತೋ ಆ ದೇವಾಲಯಗಳ ಹಣ ಸಿ-ದರ್ಜೆಯ ದೇವಾಲಯಗಳಿಗೆ ಬಳಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ತಮ್ಮ ರಾಜಕೀಯಕ್ಕೋಸ್ಕರ ನಿಜವಾಗಿಯೂ ಹಿಂದೂಗಳಿಗೆ ನೋವುಂಟು ಮಾಡ್ತಿರೋದು ಬಿಜೆಪಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

ಇನ್ನೂ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗುತ್ತಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮೈಸೂರು ಕ್ಷೇತ್ರದಿಂದ ಟಿಕೆಟ್‌ ಕೊಡಿ ಅಂತ ಕೇಳಿಕೊಂಡಿಲ್ಲ. ಲೋಕಸಭಾ ಆಕಾಂಕ್ಷಿ ನಾನಲ್ಲ, ಮೈಸೂರಿಗೆ ಯಾರು ಸೂಕ್ತ ಅಭ್ಯರ್ಥಿ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

Share This Article