5 ವರ್ಷ ಸಿದ್ದರಾಮಯ್ಯನವರೇ ಸಿಎಂ – ಯತೀಂದ್ರ ಬ್ಯಾಟಿಂಗ್‌

Public TV
2 Min Read

ಮೈಸೂರು: ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್‌ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಚೀತಾಗಳ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ನಮೀಬಿಯಾಗೆ ಮೋದಿ ಕೃತಜ್ಞತೆ

ಇನ್ನೂ ಓಬಿಸಿ ಸಮಿತಿಗೆ ಸಿಎಂ ಆಯ್ಕೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ್ರಿ ಹೇಳಿದ್ದು ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಅಂತ ಕೆಂಡಾಮಂಡಲರಾದರು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಳಸಿದ ದಾಲ್‌ ಬಡಿಸಿದ್ದಕ್ಕೆ ಶಾಸಕನಿಂದ ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆ – ಕ್ಯಾಂಟೀನ್‌ ಲೈಸೆನ್ಸೇ ರದ್ದು

ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದ್ರೆ ಆಗಲ್ಲ. ನಮ್ಮ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಕೆ ಮಾಡ್ತಾರೆ. ಹಾಗಾಗಿ ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸರ್ಕಾರ ಬಂದಾಗಿದ ಈ ಪ್ರಶ್ನೆಗೆ ಉತ್ತರ ಮಾಡುತ್ತಿದ್ದೇನೆ ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜು.28ರಂದು ಮದ್ದೂರಿಗೆ ಸಿಎಂ – 1,400 ಕೋಟಿ ವೆಚ್ಚದ 75 ಕಾಮಗಾರಿಗಳ ಉದ್ಘಾಟನೆ

ರಂಭಾಪುರಿ ಶ್ರೀ ಹೇಳಿಕೆಗೆ ತಿರುಗೇಟು
ಇನ್ನೂ ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಅನ್ನೋ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಇದನ್ನ ಈಗಲ್ಲ, ಕಳೆದಬಾರಿ ಭಾಗ್ಯಗಳನ್ನ ಕೊಟ್ಟಾಗಲೂ ಹೀಗೆ ಹೇಳ್ತಿದ್ರು. ಯಾರೂ ಸೋಮಾರಿಗಳಾಗಲ್ಲ, ಬಡವರು ಹೊಟ್ಟೆ ತುಂಬಾ ಊಟ ಮಾಡಿ ಸೋಮಾರಿ ಆಗೋದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲಾ ಸಿಗುತ್ತಾ? ಜೀವನಕ್ಕಾಗಿ ಅವರೂ ದುಡಿಯುತ್ತಾರೆ. ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರೋರು ಹೇಳುವ ಮಾತುಗಳು ಎಂದು ತಿರುಗೇಟು ನೀಡಿದ್ದಾರೆ.

ಇದೇ ಪ್ರಶ್ನೆಯನ್ನ ಶ್ರೀಮಂತರ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ಕೇಳಲಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗೆ ಯಾಕೆ ಕಣ್ಣುರಿ? ಯಾರು ಏನೇ ಟೀಕೆ ಮಾಡಿದ್ರೂ ನಾವು ಕೊಟ್ಟೇ ಕೊಡ್ತೀವಿ ಎಂದು ತಿಳಿಸಿದ್ದಾರೆ.

Share This Article