ಜನಸಂಪರ್ಕ ಸಭೆ ಬೇಕಾಬಿಟ್ಟಿ ಮಾಡ್ತಿದ್ದೀವಾ? – ನೀರಾವರಿ ಇಲಾಖೆ ಅಧಿಕಾರಿಗೆ ಯತೀಂದ್ರ ಕ್ಲಾಸ್

1 Min Read

ಮೈಸೂರು: ನೀರಾವರಿ ಇಲಾಖೆ ಅಧಿಕಾರಿಗೆ (Irrigation Department Officer) ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಕ್ಲಾಸ್ ತೆಗೆದು ಕೊಂಡಿದ್ದಾರೆ. ಫೋನಿನಲ್ಲೇ ಅಧಿಕಾರಿಗೆ ಬೆವರಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ವ್ಯಾಪ್ತಿಯ ಹನುಮನಪುರ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌- 8 ಮಂದಿ ಅರೆಸ್ಟ್‌

ಯತೀಂದ್ರ ಬಳಿ ರೈತರು ಸಮಸ್ಯೆ ಹೇಳಿಕೊಂಡರು. ಕೂಡಲೇ ಅಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಯತೀಂದ್ರ ಸಿದ್ದರಾಮಯ್ಯ, ಏನ್ ಆಟ ಆಡ್ತಿದ್ದೀರಾ? ಸಿಎಂ ಕ್ಷೇತ್ರದಲ್ಲೇ ಹೀಗಾದ್ರೆ ಬೇರೆ ಕಡೆ ಹೇಗೆ ಕೆಲಸ ಮಾಡ್ತೀರಾ? ಜನಸಂಪರ್ಕ ಸಭೆ ಸುಮ್ಮನೆ ಮಾಡ್ತಿದ್ದೀವಾ? ಕೂಡಲೇ ನಿರ್ಲಕ್ಷ್ಯ ಮಾಡಿದ ಅಧಿಕಾರಿ ಮೇಲೆ ಕ್ರಮ ಆಗಬೇಕು ಎಂದು ಹಿರಿಯ ಅಧಿಕಾರಿಗೆ ಗದರಿದ್ದಾರೆ. ಇದನ್ನೂ ಓದಿ: ಆಕ್ಸಿಡೆಂಟ್ ವಲಯವಾಗುತ್ತಿದೆ ಬೆಂಗಳೂರಿನ ರಿಂಗ್‌ ರೋಡ್‌ ಫ್ಲೈಓವರ್!

Share This Article