ಸ್ವಾಮೀಜಿಯವರಿಗೆ ಅವಮಾನ ಮಾಡುವ ರೀತಿ ತಂದೆ ಹೇಳಿಕೆ ಕೊಟ್ಟಿಲ್ಲ: ಯತೀಂದ್ರ ಸಿದ್ದರಾಮಯ್ಯ

Public TV
2 Min Read

ಮೈಸೂರು: ನಿನ್ನೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ, ತಂದೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಲೆ ಮೇಲೆ ಬಟ್ಟೆ ಹಾಕುವುದು ತಪ್ಪಲ್ಲ. ಇದನ್ನು ಹೇಳಲು ಆ ಹೋಲಿಕೆ ನೀಡಿದ್ದು, ಜನ ಸಾಮಾನ್ಯರಿಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದ್ದಾರೆ.ದುಪ್ಪಟವನ್ನು, ಸ್ವಾಮಿಜಿಗಳ ಶಿರವಸ್ತ್ರಕ್ಕೆ ಹೋಲಿಸಿಲ್ಲ. ಸಿದ್ದರಾಮಯ್ಯ ಸ್ವಾಮೀಜಿಗೆ ಅವಮಾನ ಮಾಡುವ ರೀತಿ ಹೇಳಿಕೆ ಕೊಟ್ಟಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ತಂದೆ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ


ವಿದ್ಯಾರ್ಥಿಗಳು ಹಿಜಬ್ ಇಲ್ಲದೆ ಪರೀಕ್ಷೆಗೆ ಬರುತ್ತಿಲ್ಲ. ಹಿಜಬ್ ಬದಲು ದುಪ್ಪಟಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದಾರೆ. ಇದನ್ನು ವಿಧಾನಸಭೆಯಲ್ಲೂ ಅವರು ಹೇಳಿದ್ದರು, ಇದರಲ್ಲೀ ತಪ್ಪೇನಿದೆ? ಬಿಜೆಪಿ ನಾಯಕರದ್ದೇ ತಪ್ಪು ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯವರೂ ತಲೆಯ ಮೇಲೆ ಬಟ್ಟೆ ಹಾಕ್ತಾರೆ ಅದನ್ನೇಕೆ ಪ್ರಶ್ನಿಸುತ್ತೀರಾ?: ಹಿಜಬ್ ಬೆಂಬಲಿಸಿದ ಸಿದ್ದು

ಸಿದ್ದರಾಮಯ್ಯ ಹೇಳಿದ್ದೇನು?: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ ಅಂದರೆ ಅದರಲ್ಲಿ ತಪ್ಪೇನಿದೆ?. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್, ದುಪ್ಪಟ್ಟ, ಪೇಟ ನಡುವಿನ ವ್ಯತ್ಯಾಸ ಅರಿತುಕೊಳ್ಳಿ: ಸಿದ್ದರಾಮಯ್ಯ ವಿರುದ್ಧ BJP ಕಿಡಿ

SIDDARAMAIAH

ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೋಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂಬರುವ ಚುನಾವಣೆಯೇ ನನ್ನ ಕೊನೆಯ ಎಲೆಕ್ಷನ್: ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *