ಥಿಯೇಟರ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿರುವಾಗಲೇ ಓಟಿಟಿನಲ್ಲಿ `ಕೆಜಿಎಫ್ 2′ ರಿಲೀಸ್

Public TV
1 Min Read

ಶ್ ನಟನೆಯ `ಕೆಜಿಎಫ್ 2′ ಬಾಕ್ಸಾಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡಿ, 50 ದಿನಗಳನ್ನು ಪೂರೈಸಿದೆ. ಈಗಲೂ ಜನರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ಬೆನ್ನಲ್ಲೇ `ಕೆಜಿಎಫ್ 2′ ಓಟಿಟಿಗೆ ಲಗ್ಗೆ ಇಟ್ಟಿದೆ. ಇದೀಗ ಓಟಿಟಿಯಲ್ಲಿ ಯಶ್ ಸಿನಿಮಾ ರಿಲೀಸ್ ಆಗಿದೆ.

kgf 2ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಚಿತ್ರ `ಕೆಜಿಎಫ್ 2′ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈಗ ಯಶ್ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಮ್ ಸದಸ್ಯರು ಕನ್ನಡ,ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ `ಕೆಜಿಎಫ್ 2′ ಚಿತ್ರವನ್ನ ಹೆಚ್ಚುವರಿ ವೆಚ್ಚವಿಲ್ಲದೇ ವೀಕ್ಷಿಸಬಹುದಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

ಇನ್ನು ನ್ಯಾಷನಲ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ನಟಿಸಿರುವ `ಕೆಜಿಎಫ್ 2′ ಈಗಾಗಲೇ ಒಟ್ಟು 1240.9 ಕೋಟಿ ಗಳಿಸಿ, 1250 ಕೋಟಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಹಿಂದಿ ಬಾಕ್ಸಾಫೀಸ್‌ನಲ್ಲಿ 430 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ. ಒಟ್ನಲ್ಲಿ ಯಶ್ ಸಿನಿಮಾ ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ವಿನಃ ಕಮ್ಮಿಯಾಗುತ್ತಿಲ್ಲ.‌

Share This Article
Leave a Comment

Leave a Reply

Your email address will not be published. Required fields are marked *