ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

By
2 Min Read

ದೀಪಿಕಾ ದಾಸ್ (Deepika Das) ಬಗ್ಗೆ ನಾನು ಮಾತಾಡಿದ್ದು ನಿಜ. ಆದ್ರೆ ಆ ಬಗ್ಗೆ ಈಗ ನಾನು ಈಗ ಪ್ರತಿಕ್ರಿಯೆ ನೀಡಲ್ಲ. ಅದೆಲ್ಲದಕ್ಕೂ ನಾನು ಕೊಡುವ ಉತ್ತರ ಇಷ್ಟೇ ಎಂದು ಯಶ್‌ (Yash) ತಾಯಿ ಪುಷ್ಪ ಅರುಣ್‌ ಕುಮಾರ್‌ (Pushpa Arunkumar) ಹೇಳಿದ್ದಾರೆ.

ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ತೆಲುಗು ಸಿನಿಮಾವನ್ನು ಕನ್ನಡಕ್ಕೆ ವಿತರಣೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಈ ವೇಳೆ ಪುಷ್ಪಮ್ಮ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ದೀಪಿಕಾ ದಾಸ್ ಬಗ್ಗೆ ವೈರಲ್ ಆದ ವಿಡಿಯೋ ಬಗ್ಗೆ ಹಾಗೂ ಅದಕ್ಕೆ ದೀಪಿಕಾ ದಾಸ್ ಪ್ರತಿಕ್ರಿಯೆ ಕೊಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವುದೇ ಪ್ರತಕ್ರಿಯೆ ನೀಡುವುದಿಲ್ಲ. ನಾವು ಅವರು ಬೇರೆ ಬೇರೆ ಅಲ್ಲ ಒಂದೇ ಕುಟುಂಬದವರು. ನಾವೆಲ್ಲ ಒಂದೇ ಕಡೆ ಇರ್ತಿವಿ. ಈ ವಿಷಯ ಜಾಲತಾಣದಲ್ಲಿ ವೈರಲ್ ಆದ ಮೇಲೆ ನನ್ನ ಮಗ ಯಶ್ ಈ ವಿಚಾರವಾಗಿ ನಮ್ಮ ಬಳಿ ಏನೂ ಮಾತಾಡಿಲ್ಲ. ಯಶ್ ಆಗಲಿ ಮತ್ತೊಬ್ಬರಾಗಲಿ ನನ್ನ ಕೇಳುವಷ್ಟು ಇಲ್ಲ. ನಾನು ಯಾವ ಕಾರಣಕ್ಕೆ ಮಾತ್ನಾಡಿದ್ದೇನೆ ಅನ್ನೋದು ಅವರಿಗೆ ಗೊತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂ.ಎನ್‌ಟಿಆರ್‌ಗಾಗಿ ಸಿದ್ಧಸೂತ್ರ ಮುರಿಯಲು ಸಜ್ಜಾದ ಪ್ರಶಾಂತ್ ನೀಲ್

 

ಸದ್ಯ ತಮ್ಮ ಕೊತ್ತಲವಾಡಿ ಸಿನಿಮಾದ ವೇಳೆ ಎದುರಾದ ಸಮಸ್ಯೆಗಳನ್ನುಅರಿತುಕೊಂಡು ಸಿನಿಮಾ ತರಣೆಗೂ ಧುಮುಕಿದ್ದಾರೆ. ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ವಿತರಣೆ ಮಾಡುವ ಪ್ಲ್ಯಾನ್‌ ಹೊಂದಿರುವ ಪುಷ್ಪ ಅರುಣ್‌ಕುಮಾರ್ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ (Anushka Shetty) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಘಾಟಿ (Ghaati) ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Share This Article