ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಮಂತ್ರಿಮಾಲ್ ಗೋಡೆ ಕುಸಿದು ಕೆಲ ಸಮಯ ಬಾಗಿಲು ಮುಚ್ಚಿದ್ದು ನಿಮ್ಗೆಲ್ಲ ಗೊತ್ತೇ ಇದೆ. ಬಿಬಿಎಂಪಿಯಿಂದ ಕೆಲವೇ ದಿನಗಳಲ್ಲಿ ಕ್ಲೀನ್ ಚಿಟ್ ಪಡೆದ ಮಂತ್ರಿ ಮಾಲ್ ರೀ ಓಪನ್ ಆಯ್ತು. ಆದರೆ ಗೋಡೆ ಕುಸಿದ ಪರಿಣಾಮ ತನ್ನ ಕಾಲು ಕಳೆದುಕೊಂಡ ಆ ಬಡಪಾಯಿ ಮಾತ್ರ ಮಕ್ಕಳ ಸಮೇತ ಬೀದಿಗೆ ಬಿದ್ದಿದ್ದಾರೆ.

ಯಶೋಧ ಇಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಯಶೋಧ ಅವರ ಇವತ್ತಿನ ಸ್ಥಿತಿಗೆ ಕಾರಣ ಪ್ರತಿಷ್ಠಿತ ಮಂತ್ರಿ ಮಾಲ್. ಮಂತ್ರಿ ಮಾಲ್‍ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜನವರಿ 15ರಂದು ಗೋಡೆ ಕುಸಿದು ಕಾಲು ಕಳೆದುಕೊಂಡಿದ್ದರು. ಈ ಬಗ್ಗೆ ದೂರು ಕೊಡಬೇಡಿ. ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ನೋಡಿಕೊಳ್ತೀವಿ ಅಂದಿದ್ದ ಮಂತ್ರಿ ಮಾಲ್‍ನ ದುಡ್ಡಿರೋ ದೊಡ್ಡ ಜನ ಇವತ್ತು ಯಶೋಧರ ಕೈ ಬಿಟ್ಟಿದ್ದಾರೆ.

ಯಶೋಧ ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಬಲಗಾಲಿನ ಮಂಡಿ ಚಿಪ್ಪಿಗೆ ಸರ್ಜರಿ ಮಾಡಿಸೋಕೂ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ಮೂರು ತಿಂಗಳಿಂದ ಸಂಬಳ ಇಲ್ಲದೇ ತುತ್ತು ಅನ್ನಕ್ಕೂ ಪರದಾಡೋ ಪರಿಸ್ಥಿತಿ ಯಶೋಧರ ಮನೆಯಲ್ಲಿದೆ. ಜೀವನಕ್ಕೆ ಆಸರೆಯಾಗಿದ್ದ ಟೈಲರಿಂಗ್ ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇಡೀ ಕುಂಟುಂಬ ಕಣ್ಣೀರಿಡುತ್ತಿದೆ.

https://www.youtube.com/watch?v=szVZzTuwMbU

https://www.youtube.com/watch?v=Oue_rKdpkDU

https://www.youtube.com/watch?v=Gv40HgSywO0

 

Share This Article
Leave a Comment

Leave a Reply

Your email address will not be published. Required fields are marked *