ಶಾರುಖ್ ಖಾನ್ ಜೊತೆ ಯಶ್ ಮಾತುಕತೆ: ‘ಟಾಕ್ಸಿಕ್’ನಲ್ಲಿ ಬಾಲಿವುಡ್ ನಟ

Public TV
1 Min Read

ಟಾಕ್ಸಿಕ್ (Toxic) ಸಿನಿಮಾ ಕುರಿತಂತೆ ವಾರಕ್ಕೊಂದು ಸುದ್ದಿಗಳು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಈ ವಾರ ಬಂದ ಸುದ್ದಿ ಏನೆಂದರೆ, ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan), ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ಶಾರುಖ್ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆಯಂತೆ. ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರಂತೆ. ಈ ಹಿಂದೆಯೂ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು.

ಈ ಕುರಿತಂತೆ ಕರೀನಾ ಕಪೂರ್ ತಂಡ ಉತ್ತರವನ್ನು ಕೊಟ್ಟಿದೆ. ಟಾಕ್ಸಿಕ್ ವಿಚಾರದಲ್ಲಿ ಕರೀನಾ (Kareena Kapoor) ಹೆಸರು ಕೇಳಿ ಬಂದಿದ್ದು ಅಚ್ಚರಿ ತಂದಿದೆ. ಸುಖಾಸುಮ್ಮನೆ ಸುದ್ದಿಗಳನ್ನು ಹರಡಬೇಡಿ. ಆದರೆ, ಕರೀನಾ ಅವರು ನಟಿಸಲಿರುವ ಮುಂದಿನ ಸಿನಿಮಾ ಹಾಗೂ ಕಲಾವಿದರ ಬಗ್ಗೆ ಎಕ್ಸೈಟಿಂಗ್ ವಿಚಾರವಿದೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲವನ್ನು ಮೂಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಾನು ‘ಕೆಜಿಎಫ್’ (KGF) ಗರ್ಲ್ ಎಂದು ಯಶ್ (Yash) ಬಗ್ಗೆ ಹಾಡಿಹೊಗಳಿದ್ದರು ನಟಿ ಕರೀನಾ ಕಪೂರ್.  ಈ ಹೇಳಿಕೆ ನೀಡಿದ ಒಂದೇ ತಿಂಗಳಲ್ಲೇ ಟಾಕ್ಸಿಕ್ ನಲ್ಲಿ ಅವರು ನಟಿಸಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಯಶ್ ಸಿನಿಮಾಗೆ ಕರೀನಾ ಕಪೂರ್ ಸಾಥ್ ನೀಡೋದು ಖಚಿತ ಎಂದು ಹೇಳಲಾಗಿತ್ತು.

 

‘ಕೆಜಿಎಫ್’ ಸೀರಿಸ್ ಬಳಿಕ ಯಶ್ ಟಾಕ್ಸಿಕ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಯಶ್ ಬರ್ತ್‌ಡೇಯಂದು ‘ಟಾಕ್ಸಿಕ್’ ಟೀಮ್ ಸರ್ಪ್ರೈಸ್ ಕೊಡಬಹುದು ಎಂಬ ನಿರೀಕ್ಷೆಯಿದೆ. ಆದರೆ, ಅದು ಆಗಲಿಲ್ಲ. ಯಶ್ ಅಭಿಮಾನಿಗಳ ದುರಂತ ಮರಣ, ಯಶ್ ಅವರಿಗೆ ಶಾಕ್ ನೀಡಿತ್ತು.

Share This Article