ಯಶ್ `ಟಾಕ್ಸಿಕ್’ಗೆ ಹೊಸ ವಿಲನ್ ಸೇರ್ಪಡೆ

Public TV
1 Min Read

ಯಾವುದೋ ಒಂದು ಸಿನಿಮಾದ ಜಾಡು ಹಿಡಿದು ಹೋಗಬಹುದು, ಆದರೆ ಯಶ್  (Yash) `ಟಾಕ್ಸಿಕ್’ (Toxic) ಚಿತ್ರದ ಮಾಹಿತಿ ಕಲೆಹಾಕುವುದು ಅಷ್ಟು ಸುಲಭದ ಮಾತಲ್ಲ. ಇದುವರೆಗೂ ಚಿತ್ರದ ತಾರಾಗಣದ ಕುರಿತು ಒಂದೇ ಒಂದು ಸಿಂಗಲ್ ಆಫೀಷಿಯಲ್ ಕನ್ಫರ್ಮೇಷನ್ ಕೊಡದ `ಟಾಕ್ಸಿಕ್’ ತಂಡಕ್ಕೆ ಇದೀಗ ಇನ್ನೋರ್ವ ಹೊಸ ಕಲಾವಿದ ಸೇರಿಕೊಂಡ ಸುದ್ದಿ ಬಂದಿದೆ. ಅವರು ಬೇರಾರೂ ಅಲ್ಲ ಟಾಲಿವುಡ್ ಚಿತ್ರರಂಗದ ಬಹುಮುಖ ಪ್ರತಿಭೆ, ಹಿರಿಯ ನಟ ತನಿಕೆಲ್ಲ ಭರಣಿ.

ಅಂದಹಾಗೆ ತನಿಕೆಲ್ಲ ಭರಣಿ  (Tanikella Bharani) `ಟಾಕ್ಸಿಕ್’ ತಂಡಕ್ಕೆ ಸೇರಿಕೊಂಡ ವಿಚಾರವನ್ನ `ಟಾಕ್ಸಿಕ್’ ಟೀಮ್ ಘೋಷಣೆ ಮಾಡಿಲ್ಲ. ಆದರೆ ಭರಣಿ ಇನ್ಸ್ಟಾ ಖಾತೆಯಲ್ಲಿ ಕೊಟ್ಟ ಸುಳಿವು ಹೌದೆನ್ನುತ್ತಿದೆ. ಯಶ್ ಜೊತೆ ಕ್ಯಾರೆವ್ಯಾನ್‌ನಲ್ಲಿ ನಟ ಭರಣಿ ಶೂಟಿಂಗ್ ಕಾಸ್ಟ್ಯೂಮ್ ಹಾಕಿ ಪೋಸ್ ಕೊಟ್ಟಿದ್ದಾರೆ. ಇದು ಯಶ್ ಜೊತೆ ಭರಣಿ ಕೈಜೋಡಿಸಿರುವ ಸುಳಿವು ಎಂದು ಭಾವಿಸಬಹುದಾಗಿದೆ. ಯಾಕಂದ್ರೆ ಕಾರಣವಿಲ್ಲದೆ ಯಶ್ ಯಾರನ್ನೂ ಅಷ್ಟು ಸುಲಭವಾಗಿ ಭೇಟಿಯಾಗಿಲ್ಲ. ಹೀಗಾಗೇ ಟಾಲಿವುಡ್ ಅಂಗಳದಲ್ಲಿ `ಟಾಕ್ಸಿಕ್’ ಚಿತ್ರಕ್ಕೆ ಭರಣಿ ಸೇರಿರುವ ಸುದ್ದಿ ವೈರಲ್ ಆಗಿದೆ.

ಯಶ್ ಸೇರಿದಂತೆ ಉಳಿದ ನಟ ನಟಿಯರು ಯಾರೆಲ್ಲಾ ಟಾಕ್ಸಿಕ್‌ನಲ್ಲಿ ಯಾವ್ಯಾವ ಪಾತ್ರ ಮಾಡ್ತಾರೆ ಅನ್ನೋ ವಿಚಾರ ನಿಗೂಢವಾಗೇ ಇದೆ. ಮುಹೂರ್ತದ ವಿಚಾರವನ್ನಷ್ಟೇ ಆಫಿಷಿಯಲ್ ಕನ್ಫರ್ಮ್ ಮಾಡಿರುವ ಟಾಕ್ಸಿಕ್ ತಂಡದಿಂದ ಬಳಿಕ ಯಾವುದೇ ಆಫಿಷಿಯಲ್ ಮಾಹಿತಿ ಹೊರಬಿದ್ದಿಲ್ಲ.

ಮೊನ್ನೆ ಮೊನ್ನೆಯಷ್ಟೇ ನಯನತಾರಾ ಶೂಟಿಂಗ್ ಸೆಟ್ಟಿಗೆ ಆಗಮಿಸಿ ತಮ್ಮ ಮೊದಲ ಹಂತದ ಚಿತ್ರೀಕರಣ ಮುಗಿಸಿ ಕೊಟ್ಟ ಮಾಹಿತಿ ಇದೆ. ಇದೀಗ ಟಾಲಿವುಡ್‌ನ ಈ ಬಹುಮುಖ ಪ್ರತಿಭೆ ತನಿಕೆಲ್ಲ ಭರಣಿ ವಿಲನ್ ಪಾತ್ರ ಮಾಡ್ತಿದ್ದಾರಾ..? ಪೋಷಕ ಪಾತ್ರ ಮಾಡ್ತಿದ್ದಾರಾ? ಅನ್ನೋದನ್ನ ತಿಳಿಯಬೇಕು ಅಂದ್ರೆ ಬಹುಶಃ ಟೀಮ್ ಘೋಷಣೆ ಮಾಡೋವರೆಗೂ ಕಾಯಬೇಕಾಗುತ್ತೆ.

Share This Article