ಚಂದನವನದ ಮುದ್ದಾದ ಜೋಡಿ ಅಂದ್ರೆ ಯಶ್ ಮತ್ತು ರಾಧಿಕಾ, ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಾಂಕಿಂಗ್ ಸ್ಟಾರ್ ದಂಪತಿ ಸದ್ಯ ವೆಕೇಶನ್ ಮೂಡ್‌ನಲ್ಲಿದ್ದಾರೆ. ಯುರೋಪ್‌ನ ಬೀದಿ ಬೀದಿಗಳಲ್ಲಿ ಕೈ ಕೈ ಹಿಡಿದು ಜಾಲಿ ಮೂಡ್‌ನಲ್ಲಿದ್ದಾರೆ.
View this post on Instagram
`ಕೆಜಿಎಫ್ 2′ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಯಶ್ ಸದ್ಯ ಪತ್ನಿ ರಾಧಿಕಾ ಪಂಡಿತ್ ಜೊತೆ ವೆಕೇಶನ್ ಮೂಡ್‌ನಲ್ಲಿದ್ದಾರೆ. ಯುರೋಪ್‌ನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ, ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಹೊಸ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?
ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?
View this post on Instagram
ನಮ್ಮ ನೆಚ್ಚಿನ ಜಾಗವಿದು, ಯಾರೋ ಹೇಳಿದ್ದರು ಇದು ಇಟಲಿ ಅಂತಾ ಆದರೆ ಅಲ್ಲಾ ಅಂತಾ ಅಡಿಬರಹ ನೀಡಿ, ಪತಿ ಜತೆಗಿನ ಸುಂದರ ಫೋಟೋಗಳನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇನ್ನು ʼಯಶ್ 19ʼ ಚಿತ್ರದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.