ಯಶ್ (Yash) ತಾಯಿ ಪುಷ್ಪ ಇದೀಗ ನಿರ್ಮಾಪಕಯಾಗಿರೋದು ಗೊತ್ತಿರೋ ವಿಚಾರ. ಅವರ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ (Kothalavadi Movie) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ಪ್ರಚಾರದ ಆರಂಭಿಕ ಪ್ರಕ್ರಿಯೆಯಲ್ಲಿ ವಿಶೇಷತೆ ಮೆರೆದ ಸ್ಟಾರ್ ನಟನ ತಾಯಿ ಕರುನಾಡ ಆರಾಧ್ಯ ದೈವ, ಡಾ. ರಾಜ್‌ಕುಮಾರ್ (Rajkumar) ಸಮಾಧಿ ಹಾಗೂ ಕನ್ನಡಿಗರ ಕಣ್ಮಣಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಸ್ವಯಂ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಹುಟ್ಟು ಹಬ್ಬದ ದಿನ ಆಂಜನೇಯ ಅವತಾರವೆತ್ತ ಗಣೇಶ್
ಯಶ್ ತಾಯಿ ಪುಷ್ಪಮ್ಮ, ಡಾ.ರಾಜ್‌ಕುಮಾರ್ ಮೇಲಿನ ಅಭಿಮಾನವನ್ನ ಹೊರ ಹಾಕೋದ್ರಲ್ಲಿ ಯಾವತ್ತೂ ಹಿಂಜರಿದವರಲ್ಲ. ನೇರವಾಗಿ ಮಾತನಾಡುವ ಅವರು, ‘ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ದೇವರಿದ್ದಂತೆ. ಹೀಗಾಗಿ ಮೊದಲ ಚಿತ್ರದ ಪ್ರಚಾರ ಪ್ರಾರಂಭಿಸುವ ಮೊದಲು ದೇವರ ಪೂಜೆ ಮಾಡಿದ್ದೇನೆ’ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಜೊತೆಗೆ ಅಪ್ಪು (Puneeth Rajkumar) ನಮ್ಮನೆ ಮಗ ಇದ್ದಂತೆ, ದುರಾದೃಷ್ಟಕ್ಕೆ ಅವರು ಹೋಗ್ಬಿಟ್ರು.. ಅಪ್ಪುವನ್ನ ನೆನೆದು ಅಪ್ಪುಗೆ ಪೂಜೆ ಮಾಡಿಯೇ ಪ್ರಚಾರ ಕಾರ್ಯ ಶುರು ಮಾಡುತ್ತಿದ್ದೇವೆ. ಅಂಬರೀಶ್ ಸಮಾಧಿಗೂ ಪೂಜೆ ಮಾಡಿ ಬಂದಿದ್ದೇನೆ. ಅವರು ಯಶ್‌ರನ್ನ ತುಂಬಾ ಪ್ರೀತಿಸುತ್ತಿದ್ದವರು ಎಂದಿದ್ದಾರೆ ಯಶ್ ತಾಯಿ ಪುಷ್ಪ.
ಯಶ್ ತಾಯಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ಕೊಡಬೇಕು ಎಂದು ಹೊಸಬರ ಜೊತೆ ಕೈಜೋಡಿಸಿ ಸಿನಿಮಾ ಅಭಿಮಾನ ಮೆರೆದಿದ್ದಾರೆ. ಹೊಸ ಉತ್ಸಾಹಿ ತಂಡಕ್ಕೆ ಚಿತ್ರ ಮಾಡೋದಾಗಿ ಹಿಂದೆಯೇ ಹೇಳಿಕೊಂಡಿದ್ರು. ಅದರಂತೆ ಕೊತ್ತಲವಾಡಿ ಚಿತ್ರ ಮಾಡಿದ್ದಾರೆ. ಮನೆಯಲ್ಲಿ ದೊಡ್ಡ ಸ್ಟಾರ್ ಇದ್ದರೂ ಯಾವುದೇ ಆತಂಕ ಮಾಡಿಕೊಳ್ಳದೆ ಸಾಮಾನ್ಯರಂತೆ ಡಾ.ರಾಜ್‌ಕುಮಾರ್ ಹಾಗೂ ಅಪ್ಪು ಸಮಾಧಿಗೆ ಪೂಜೆ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಎತ್ತಿ ಮುದ್ದಾಡಿದ ಯಶ್