ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ

1 Min Read

– ರೌಡಿಸಂ ಮಾಡ್ತೀಯಾ ಅಂತ ಗುಡುಗಿದ ಯಶ್‌ ತಾಯಿ ಪುಷ್ಪಾ

ಹಾಸನ: ರಾಕಿಂಗ್ ಸ್ಟಾರ್ ಯಶ್ (Actor Yash) ತಾಯಿ ಮನೆ ಸಮೀಪದ ನಿವೇಶನ ಮಾಲೀಕತ್ವ‌ ಜಟಾಪಟಿ ಮತ್ತೆ ಸುದ್ದಿಯಾಗಿದೆ. ಯಶ್‌ ತಾಯಿ ಮನೆ ಬಳಿಯ ಕಾಂಪೌಂಡ್‌ ಕೆಡವಿಸಿದ್ದ ಮಾಲೀಕನ ಜೊತೆ ಪುಷ್ಪಾ ಅರುಣ್‌ಕುಮಾರ್‌ (Pushpa Arunkumar) ವಾಗ್ವಾದ ನಡೆಸಿದ್ದಾರೆ.

ಸೈಟ್ ಬಳಿ ಆಗಮಿಸಿರುವ ಯಶ್ ತಾಯಿ ಪುಷ್ಪಾ ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಾಗಿದ್ದರು. ಇದೇ ವೇಳೆ ಸೈಟ್ ಬಳಿ ದೇವರಾಜು ಆಗಮಿಸಿದ್ದಾರೆ. ದೇವರಾಜು ಅವರಿಗೆ ದಾಖಲೆಗಳನ್ನು ತೋರಿಸು ಎಂದ ಪುಷ್ಪಾ ಅವರು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಇದನ್ನೂ ಓದಿ: ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ; ಯಶ್ ತಾಯಿಗೆ ಕೋರ್ಟ್ ಶಾಕ್ – ಕಾಂಪೌಂಡ್ ಧ್ವಂಸ

ಮೊದಲು ದಾಖಲೆಗಳನ್ನು ಕೊಡು ಎಂದು ಪುಷ್ಪಾ ಅವರು ಪ್ರಶ್ನಿಸಿದ್ದಾರೆ. ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು. ಸೈಟ್ ಒಳಗೆ ಕಾಲಿಡಬೇಡ ಎಂದ ಪುಷ್ಪಾ ಏರುದನಿಯಲ್ಲಿ ಮಾತನಾಡಿದ್ದಾರೆ. ನೀವು ಈ ರೀತಿ ಮಾತನಾಡಬಾರದು ಎಂದ ದೇವರಾಜು ಹೇಳಿದ್ದಾರೆ.

ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತೀಯಾ. ನಾನು ಎಸ್ಪಿಗೆ ದೂರು ಕೊಡ್ತೀನಿ. ಇನ್ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನ್ನಿರಲ್ಲ ಎಂದು ಯಶ್‌ ತಾಯಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರ ಜಾಗ ಪಡೆದಿದ್ದೇವೆ: ಯಶ್‌ ತಾಯಿ ರಿಯಾಕ್ಷನ್‌

ಏನಿದು ಪ್ರಕರಣ?
ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್ ಶಾಕ್ ಕೊಟ್ಟಿತ್ತು. ಬೇರೆಯವರ ಜಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾದ ಕಾಂಪೌಂಡ್‌ನ್ನು ಧ್ವಂಸಗೊಳಿಸಲಾಗಿತ್ತು. ಹಾಸನ (Hassan) ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದರು. ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದರು. 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿತ್ತು. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿತ್ತು.

Share This Article