ಯಶ್ ಜೊತೆ ಮತ್ತೆ ನೀಲ್- ‘ಕೆಜಿಎಫ್ 3’ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್

Public TV
1 Min Read

ರಾಕಿ ಭಾಯ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿ. ಯಶ್ (Yash) ಮುಂದಿನ ಸಿನಿಮಾ ಯಾವುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ. ಕೆಜಿಎಫ್ ಪಾರ್ಟ್‌ 3ಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಮತ್ತೆ ರಾಕಿಭಾಯ್ ಆರ್ಭಟ ಶುರುವಾಗಲಿದೆ. ಇದನ್ನೂ ಓದಿ:ಮತ್ತೆ ಲವರ್‌ ಬಾಯ್‌ ಆಗಿ ಕಿರುತೆರೆಯತ್ತ ಸ್ಕಂದ ಅಶೋಕ್

ಹೊಂಬಾಳೆ‌ ಸಂಸ್ಥೆ ನಿರ್ಮಾಣದ ಕೆಜಿಎಫ್ 1 ಮತ್ತು ಕೆಜಿಎಫ್ 2 (KGF 2) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ಟೀಮ್ ಯಶ್ ಹುಟ್ಟುಹಬ್ಬಕ್ಕೆ ಶುಭಕೋರಿ, ಕೆಜಿಎಫ್ 3 (KGF 3) ಬಗ್ಗೆ ಅಪ್‌ಡೇಟ್ ನೀಡಿತ್ತು. ಆದರೆ ಯಾವಾಗ ಎಂಬುದಕ್ಕೆ ಉತ್ತರವಿರಲಿಲ್ಲ. ಆದರೆ ಪಾರ್ಟ್‌ 3 ಶೀಘ್ರದಲ್ಲೇ ಶುರು ಮಾಡೋದಕ್ಕೆ ತಯಾರಿ ನಡೆಯುತ್ತಿದೆ. ಪ್ರಭಾಸ್ ನಟನೆಯ ಸಲಾರ್ ಕಂಪ್ಲೀಟ್ ಕೆಲಸ ಮುಗಿಯುತ್ತಿದ್ದಂತೆ ಪ್ರಶಾಂತ್‌ನೀಲ್ ಕೆಜಿಎಫ್ 3 ಕೈಗೆತ್ತಿಕೊಳ್ಳುತ್ತಾರೆ.

ಸಲಾರ್ ಬಳಿಕ ಜ್ಯೂ.ಎನ್ ಟಿಆರ್ ಜೊತೆ ಪ್ರಶಾಂತ್ ನೀಲ್ (Prashanth Neel) ಸಿನಿಮಾ‌ ಮಾಡ್ತಾರೆ ಎನ್ನಲಾಗಿತ್ತು. ಆದರೆ ತಾರಕ್, ಕೊರಟಾಲ ಶಿವ ನಿರ್ದೇಶನದ ‘ದೇವರು’ (Devaru) ಸಿನಿಮಾದಲ್ಲಿ ನಟಿಸುತ್ತಿದ್ದು, ಬಳಿಕ ಬಾಲಿವುಡ್ ನ ‘ವಾರ್’ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಹಾಗಾಗಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಮತ್ತೆ ಮುಂದಕ್ಕೆ ಹೋಗಲಿದೆ. ಹಾಗಾಗಿ ಮತ್ತೆ ಯಶ್ ಜೊತೆ ಪ್ರಶಾಂತ್ ನೀಲ್ ಕೈಜೋಡಿಸುತ್ತಿದ್ದಾರೆ.

ಭಾರತೀಯ ಸಿನಿಮಾರಂಗದಲ್ಲೇ ದಾಖಲೆ ಬರೆದ ಸಿನಿಮಾ ಕೆಜಿಎಫ್ (KGF) ಮುಂದುವರೆದ ಭಾಗ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಈ ಮೂಲಕ ಅಪ್ ಡೇಟ್ ಸಿಕ್ಕಿದೆ‌‌. ಮತ್ತೆ ಯಶ್- ನೀಲ್ ಕೈಚಳಕ ಪರದೆಯ ಮೇಲೆ ಕಮಾಲ್ ಮಾಡಲಿದೆ.

ಕೆಜಿಎಫ್ ಪಾರ್ಟ್ 2ನಲ್ಲಿ (KGF 2) ರಾಕಿಭಾಯ್-ರೀನಾ ಕಹಾನಿ ಎಂಡ್ ಆಗಿತ್ತು. ಪಾರ್ಟ್‌ 3ನಲ್ಲಿ ಸ್ಟೋರಿ ಹೇಗೆ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕಾತರದಿಂದ ಎದುರು ನೋಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್