ಅಪ್ಪ ಆಗ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ -ನಾವೀಗ ಮೂವರು ಎಂದ ರಾಮಾಚಾರಿ ದಂಪತಿ

Public TV
2 Min Read

ಬೆಂಗಳೂರು: ಕೆಜಿಎಫ್ ಸಿನಿಮಾ ಯಾವಾಗ ರಿಲೀಸ್ ಅಂತ ಕೇಳಿದ್ದ ಅಭಿಮಾನಿಗಳಿಗೆ ವೈಜಿಎಫ್ ಟೀಸರ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ವೈಜಿಎಫ್ ಅಂದ್ರೆ  ‘ಯಶ್ ಗೊಯಿಂಗ್ ಟು ಫಾದರ್’ ಅನ್ನೋ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಯಶ್ ತಮ್ಮ ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ವೈಜಿಎಫ್ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವೈಜಿಎಫ್ ಎಂದರೆ ‘ಯಶ್ ಗೊಯಿಂಗ್ ಟು ಬಿ ಎ ಫಾದರ್’ ಎಂದು ವಿಡಿಯೋದಲ್ಲಿ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಲ್ಲದೇ ನಟಿ ರಾಧಿಕಾ ಪಂಡಿತ್ ಕೂಡ “ಓ ನಾವು ಈಗ ಮೂವರಾಗುತ್ತಿದ್ದೀವಿ” ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ರವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ನಾನು ಅಜ್ಜಿ ಆಗೋದು ಯಾವಾಗ ಎಂದು ತಾಯಿ ಕೇಳಿದ್ದಕ್ಕೆ ಯಶ್ ಶೀಘ್ರದಲ್ಲೇ ಎಂದು ನಕ್ಕು ಉತ್ತರ ಕೊಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ ಆಟದ ಮಧ್ಯೆ ಯಶ್ ಅವರಿಗೆ ಅವರ ಕುಟುಂಬದವರು ವಿಡಿಯೋ ಕಾಲ್ ಮೂಲಕ ಒಂದೊಂದು ಪ್ರಶ್ನೆ ಕೇಳುತ್ತಿದ್ದರು. ಮೊದಲು ಅವರ ತಂದೆ ಪ್ರಶ್ನೆ ಕೇಳಿದ್ದರು. ಅವರ ತಂದೆ ಕೇಳಿದ ಪ್ರಶ್ನೆ ಉತ್ತರ ಕೊಟ್ಟರು. ಬಳಿಕ ಅವರ ತಾಯಿ ಪುಷ್ಪಾ ಅವರು ವಿಡಿಯೋ ಕಾಲ್ ಮಾಡಿ “ನಾನು ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ. ನಾನು ಅಜ್ಜಿ ಆಗೋದು ಯಾವಾಗ?” ಎಂದು ಪ್ರಶ್ನೆ ಕೇಳಿದ್ದಾರೆ.

ಅಮ್ಮನ ಪ್ರಶ್ನೆಗೆ ಯಶ್ ಮೊದಲು ನಕ್ಕು ಬಳಿಕ ಉತ್ತರಿಸಿದ್ದಾರೆ. ನಾನು ಮತ್ತು ರಾಧಿಕಾ ಇಬ್ಬರು ಏಳು ವರ್ಷ ರಿಲೇಷನ್ ಶಿಪ್ ನಲ್ಲಿ ಇದ್ವಿ. ಆಗ ಇಬ್ಬರು ಕಲಾವಿದರಾಗಿದ್ದು, ಸಾರ್ವಜನಿಕವಾಗಿ ಎಲ್ಲಿಯೂ ಓಡಾಡೋಕೆ ಸಾಧ್ಯವಾಗಿಲ್ಲ. ಇಬ್ಬರಿಗೂ ಗೌರವ-ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ಆದ್ದರಿಂದ ನಾವು ನಮ್ಮ ಮನೆಯವರ ಜೊತೆ ಇರುತ್ತಿದ್ವಿ. ಮದುವೆಯಾದ ಮೇಲೆ ಎಲ್ಲ ಕಡೆ ಸುತ್ತಾಡೋಣ ಅಂದಕೊಂಡಿದ್ವಿ. ಆದ್ದರಿಂದ ಎರಡು ವರ್ಷ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿದ್ವಿ. ಈಗ ಮದುವೆ ಆಗಿ ಒಂದುವರೆ ವರ್ಷ ಆಗಿದೆ. ಈಗ ಮನೆಯಲ್ಲಿ, ಸಂಬಂಧಿಕರು ಒತ್ತಡ ಹಾಕುತ್ತಿದ್ದಾರೆ. ನಾನು ಈ ಬಗ್ಗೆ ಎಲ್ಲಿಯೂ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ಅಮ್ಮ ಮನೆಯಲ್ಲಿ ಈ ಪ್ರಶ್ನೆ ಕೇಳಿದ್ದರೆ ರೇಗಾಡುತ್ತಿದ್ದೆ. ಸರಿಯಾದ ಜಾಗದಲ್ಲಿಯೇ ಕೇಳಿದ್ದಾರೆ. ಆದಷ್ಟೂ ಬೇಗ ಆಗುತ್ತದೆ. ಸದ್ಯಕ್ಕೆ ಇಷ್ಟೇ ಹೇಳೋದು ಎಂದು ಯಶ್ ಉತ್ತರಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *