ಯಶ್ ಅಭಿಮಾನಿಗಳ ಸಾವು ಪ್ರಕರಣ – ಮೃತರ ಮನೆಗೆ ಈಶ್ವರಪ್ಪ, ಶಾಸಕ ಚಂದ್ರು ಲಮಾಣಿ ಭೇಟಿ

Public TV
1 Min Read

– ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಟ ಯಶ್ (Yash) ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟಲು ಹೋದ ವೇಳೆ ವಿದ್ಯುತ್ ತಗುಲಿ 3 ಜನ ಅಭಿಮಾನಿಗಳು (Fans) ದಾರುಣವಾಗಿ ಸಾವನ್ನಪ್ಪಿದರು. ಇದೀಗ ಮೃತರ ಮನೆಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹಾಗೂ ಸ್ಥಳೀಯ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನಂತೆ. ಹಾಗಾಗಿ ನಿಮ್ಮ ಮಕ್ಕಳು ದೇವರಿಗೆ ಇಷ್ಟವಾಗಿರಬೇಕು. ದೇವರ ಬಳಿ ನಿಮ್ಮ ಮಕ್ಕಳಿದ್ದಾರೆ. ಅವರನ್ನು ಪೂಜಿಸಿ, ಸಮಾಧಾನ ತಂದುಕೊಳ್ಳಿ ಎಂದು ಈಶ್ವರಪ್ಪ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಬಂಧಿಸಿದ ಇಬ್ಬರು ಅತ್ಯಾಚಾರವೆಸಗಿದವರಲ್ಲ.. ಬೇರೆಯವರನ್ನ ಬಂಧಿಸಿದ್ದಾರೆ: ಸಂತ್ರಸ್ತೆ

ಈ ವೇಳೆ ಮಾಜಿ ಡಿಸಿಎಂ ಹಾಗೂ ಶಾಸಕರ ಬಳಿ ಮೃತರ ಕುಟುಂಬಸ್ಥರು ಅಳಲು ತೋಡಿಕೊಂಡರು. ನಂತರ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಸಹಾಯಧನ ಚೆಕ್ ವಿತರಣೆ ಮಾಡಿದರು. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಕಿರಾಣಿ ಅಂಗಡಿ ಉದ್ಯೋಗಕ್ಕಾಗಿ 1 ಲಕ್ಷ ರೂ. ಸಹಾಯಧನ ಹಾಗೂ ಅದಕ್ಕೆ ಬ್ಯಾಂಕ್ ಸಾಲದ ಸಬ್ಸಿಡಿ ಮೊತ್ತದಲ್ಲಿ ಮತ್ತೆ 1 ಲಕ್ಷ ರೂ. ಸಹಾಯಧನ ಸಿಗುವಂತೆ, ಒಟ್ಟು 2 ಲಕ್ಷ ರೂ. ಸಹಾಯಧನದ ಚೆಕ್ ನೀಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಬಿಜೆಪಿಯ ಅನೇಕ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ: ಶೆಟ್ಟರ್

Share This Article