ಥಿಯೇಟರ್ ಮುಂದೆ ರಾರಾಜಿಸಲು ಯಶ್ ಕಟೌಟ್ ರೆಡಿ: ಗ್ರೌಂಡ್ ರಿಪೋರ್ಟ್

Public TV
1 Min Read

ಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಏಪ್ರಿಲ್ 14 ರಿಂದ ವಿಶ್ವದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕವೊಂದರಲ್ಲೇ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ಥಿಯೇಟರ್ ಸಿಂಗಾರಗೊಳ್ಳುತ್ತಿವೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

ಚಿತ್ರಮಂದಿರಗಳ ಮುಂದೆ ನಿಲ್ಲಿಸುವುದಕ್ಕಾಗಿಯೇ ನೂರಾರು ಕಟೌಟ್ ಗಳು ರೆಡಿ ಆಗುತ್ತಿದ್ದು, ಮೊದಲ ಹಂತದಲ್ಲಿ 100 ಕಟೌಟ್ ಗಳನ್ನು ಮಾಡಲು ಹೇಳಿದೆಯಂತೆ ಹೊಂಬಾಳೆ ಫಿಲ್ಮ್ ಸಂಸ್ಥೆ. ಬೆಂಗಳೂರಿನ ರಾಜ್ ಕಮಲ್ ಆರ್ಟ್ಸ್ ನಲ್ಲಿ ಕಟೌಟ್ ಕೆಲಸ ಶುರುವಾಗಿದ್ದು, ಹಗಲು ರಾತ್ರಿ ಎನ್ನದೇ ಕಲಾವಿದರು ಈ ಕೆಲಸದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

ಮೊದಲ ಹಂತದ ಕಟೌಟ್ ಗಳಲ್ಲಿ ಯಶ್ ಅವರ ಎರಡು ಲುಕ್ ಗಳು ಇರಲಿದ್ದು, 24 ಅಡಿಯಿಂದ 72 ಅಡಿವರೆಗೂ ಈ ಕಟೌಟ್ ಗಳು ರೆಡಿಯಾಗುತ್ತಿವೆ. ಯಶ್ ಈ ಸಿನಿಮಾದಲ್ಲಿ ನಾನಾ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದರೂ, ಎರಡು ಲುಕ್ ಗಳನ್ನು ಮಾತ್ರ ಕಟೌಟ್ ಮೂಲಕ ರಿವಿಲ್ ಮಾಡಲಾಗುತ್ತಿದೆ. ಅಲ್ಲದೇ ಯಶ್ ಜತೆ ಸಂಜಯ್ ದತ್ ಅವರ ಕಟೌಟ್ ಗಳು ಕೂಡ ರಾರಾಜಿಸಲಿವೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಚಾಪ್ಟರ್ ಒಂದು ರಿಲೀಸ್ ಆದಾಗಲೇ ದಾಖಲೆ ಸೃಷ್ಟಿಸಿತ್ತು. ಈ ಸಲವೂ ಅಷ್ಟೇ ಕ್ರೇಜ್ ಕ್ರಿಯೇಟ್ ಮಾಡಿದೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಟ್ರೈಲರ್ ಭಾರೀ ಸದ್ದು ಮಾಡಿದ್ದು, ರಿಲೀಸ್ ಆದ 24 ಗಂಟೆಯಲ್ಲಿ 109 ಮಿಲಿಯನ್ ನೋಡುಗರನ್ನು ಅದು ಆಕರ್ಷಿಸಿದೆ. ಭಾರತ ಸಿನಿಮಾ ರಂಗದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ನೋಡಿದ ಟ್ರೈಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *