ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

Public TV
1 Min Read

ಸ್ಯಾಂಡಲ್‍ವುಡ್ ನಟ ಅಂಬಿ ಪುತ್ರ ಅಭಿಷೇಕ್  (Abhishek Ambareesh) ಹಾಗೂ ಅವಿವ ಬಿಡಪ (Aviva Bidpapa) ಮದುವೆ ಅದ್ದೂರಿಯಾಗಿ ನಡೆದಿದೆ. ಅವಿವ ಮದುವೆ (Wedding) ಸಂಭ್ರಮದಲ್ಲಿ ಕೆಜಿಎಫ್ 2 ಹೀರೋ ಯಶ್ (Yash), ರಾಧಿಕಾ ಪಂಡಿತ್ (Radhika Pandit) ಜೋಡಿ ಭಾಗಿಯಾಗಿದ್ದಾರೆ. ಅಭಿಷೇಕ್ ಮದುವೆಯಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು ಹೀಗೆ.

ಅಂಬರೀಶ್ ಕುಟುಂಬದ ಜೊತೆ ನಟ ಯಶ್ ದಂಪತಿಗೆ ಒಳ್ಳೆಯ ಒಡನಾಟವಿದೆ. ಅಭಿಷೇಕ್ ಹಾಗೂ ಯಶ್ ಸಹೋದರರಂತೆ ಇದ್ದಾರೆ. ಇದೀಗ ಅಭಿ ಮದುವೆಯಲ್ಲಿ ಯಶ್ – ರಾಧಿಕಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಇಬ್ಬರು ಮಸ್ತ್ ಆಗಿ ಮಿಂಚಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

ಅಭಿಷೇಕ್ ಹಾಗೂ ಅವಿವ ಮದುವೆ ಫೋಟೋ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅದರಲ್ಲೂ ಪುತ್ರ ಅಭಿಗೆ ನಟಿ ಸುಮಲತಾ ಮುದ್ದು ಮಾಡ್ತಿರುವ ಫೋಟೋ ಹೈಲೆಟ್ ಆಗುತ್ತಿದೆ.

ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್ ಹಾಗೂ ಅವಿವ ದಂಪತಿಯ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

Share This Article