ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು- ನ್ಯೂ ಇಯರ್‌ಗೆ ಯಶ್ ದಂಪತಿ ವಿಶ್ಸ್

By
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಹೊಸ ವರ್ಷಕ್ಕೆ ಚೆಂದದ ಫೋಟೋ ಶೇರ್ ಮಾಡುವ ಮೂಲಕ ಯಶ್ ದಂಪತಿ ಸ್ಪೆಷಲ್‌ ಆಗಿ ವಿಶ್ಸ್ ತಿಳಿಸಿದ್ದಾರೆ.

ಕುಟುಂಬ ಜೊತೆಗಿನ ಸಂಭ್ರಮದ ಫೋಟೋಗಳನ್ನ ಹಂಚಿಕೊಂಡು ಸ್ಪೆಷಲ್ ಆಗಿ ಶುಭಕೋರಿದ್ದಾರೆ. ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನು ಸಾಕಾರಗೊಳಿಸಬಲ್ಲದು ಎಂದು ಯಶ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬದಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಯಶ್ ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ರೆ, ಮೆರುನ್ ಬಣ್ಣದ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದಾರೆ. ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

ಇನ್ನೂ ಯಶ್ ಕುಟುಂಬದಲ್ಲಿ ಪ್ರತಿ ಹಬ್ಬವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ‘ಟಾಕ್ಸಿಕ್’ (Toxic Film) ಚಿತ್ರದ ಅಪ್‌ಡೇಟ್ ಅನ್ನು ಯಶ್ ಹಂಚಿಕೊಂಡಿದ್ದರು. ಈ ಮೂಲಕ ಯಶ್ 19 ಸಿನಿಮಾ ಯಾವುದು ಎಂಬುದಕ್ಕೆ ತೆರೆಯೆಳೆದಿದ್ದರು. ‘ಕೆಜಿಎಫ್ 2’ (KGF 2) ನಂತರ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

Share This Article