ದೆಹಲಿಯಲ್ಲಿ ಅಪಾಯಮಟ್ಟ ಮೀರಿದ ಯಮುನೆ – ಹಲವು ಪ್ರದೇಶಗಳು ಜಲಾವೃತ

By
1 Min Read

-ಹತ್ತು ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಯುಮುನಾ ನದಿಯ (Yamuna River) ಅಬ್ಬರ ಜೋರಾಗಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಗುರುವಾರದಿಂದ (ಸೆ.4) ಯಮುನಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸದ್ಯ 207 ಮೀಟರ್‌ಗೆ ತಲುಪಿದೆ. ನದಿಗೆ ಮೂರು ಬ್ಯಾರೇಜ್‌ಗಳಿಂದ ನೀರು ಹರಿಸುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಏಕಾಏಕಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.ಇದನ್ನೂ ಓದಿ: ರಾಜಸ್ಥಾನ, ಗುಜರಾತ್‌ ಸೇರಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸುತ್ತಮುತ್ತಲಿನ ಪ್ರದೇಶಗಳಾದ ಐಎಸ್‌ಬಿಟಿ ಕಾಶ್ಮೀರಿ ಗೇಟ್, ಮಯೂರ್ ವಿಹಾರ, ಶಾಸ್ತ್ರ ಪಾರ್ಕ್, ಕುಸ್ತಾ ರೋಡ್, ನೋಯ್ಡಾ, ಗಾಜೀಯಬಾದ್ ಸೇರಿದಂತೆ ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಶುಕ್ರವಾರವೂ (ಸೆ.5) ಕೂಡ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಇನ್ನೂ ಗುರುಗ್ರಾಮ್, ಫರಿದಾಬಾದ್, ಯಮುನಾನಗರ, ಮೇವಾತ್, ಪಲ್ವಾಲ್, ರೇವಾರಿ ಮತ್ತು ಮಹೇಂದ್ರಗಢ ಪ್ರವೇಶಗಳಲ್ಲಿ ಮಳೆ ಎಚ್ಚರಿಕೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಕಾರವಾರ| ಏರ್‌ ಗನ್‌ನಲ್ಲಿ ಅಣ್ಣ-ತಮ್ಮ ಆಟ; ಗುಂಡು ತಗುಲಿ ಬಾಲಕ ಸಾವು

Share This Article