ಉಡುಪಿ: ಯಕ್ಷಗಾನ ವೇಷಧಾರಿ (Yakshagana Artist) ಈಶ್ವರ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಈಶ್ವರ ಗೌಡ ಮಂದಾರ್ತಿ ಮೇಳದ ಕಲಾವಿದರಾಗಿದ್ದರು. ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ರಾತ್ರಿ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಾನು ಒಂದು ಸುಳ್ಳು ಹೇಳಿದ್ದು ಬಿಟ್ರೆ ಯಾವುದೇ ತಪ್ಪು ಮಾಡಿಲ್ಲ: ಸುಜಾತ ಭಟ್ ಕಣ್ಣೀರು
ಈಶ್ವರ ಗೌಡ ಅವರು ತಮ್ಮ ಪಾತ್ರ ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. ಮಂದಾರ್ತಿ ಮೇಳದಲ್ಲಿ ತಂದೆ ಕೂಡ ವೇಷಧಾರಿಯಾಗಿದ್ದರು. ಈಶ್ವರ ಗೌಡ ಅವರು ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಪಾತ್ರ ನಿರ್ವಹಿಸಿದ್ದರು.
