ದಾವಣಗೆರೆ: ರಾಜ್ಯದಲ್ಲಿ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಸ್ಟ್ರಾಂಗ್ ಇದೆ. ಆದರೆ ನಮ್ಮ ಪೊಲೀಸರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಕೊಡಬೇಕು ಎಂದು ಸಂಸದ ಯದುವೀರ್ ಒಡೆಯರ್ (Yaduveer Wadiyar) ರಾಜ್ಯ ಸರ್ಕಾರಕ್ಕೆ ಕುಟುಕಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ಮಹಾರಾಷ್ಟ್ರ ಪೊಲೀಸರ ದಾಳಿ ವಿಚಾರವಾಗಿ ಮಾತನಾಡಿದರು. ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಯಾರು ಏನು ಮಾಡ್ತಾ ಇರಲಿಲ್ಲ. ಈಗ ಸರ್ಕಾರ ಹೇಳಿದಂತೆ ಕೇಳಬೇಕಿದೆ ಅದ್ದರಿಂದ ಪೊಲೀಸರಿಗೆ ಸ್ವಾತಂತ್ರ್ಯ ಇಲ್ಲ ಎಂದರು. ಇದನ್ನೂ ಓದಿ: ಇಬ್ಬರ ಕೈಯಲ್ಲಿ ಎರಡೆರಡು ಗನ್ ಇತ್ತು, ಹತ್ತೇ ನಿಮಿಷದಲ್ಲಿ ಕೈಗೆ ಸಿಕ್ಕ ಆಭರಣಗಳನ್ನ ದೋಚಿಕೊಂಡು ಹೋದ್ರು: ಜ್ಯುವೆಲರಿ ಶಾಪ್ ಮಾಲೀಕ ರಶೀದ್
ಮೈಸೂರು (Mysuru) ಅರಮನೆ ಮುಂಭಾಗ ನಡೆದ ಸ್ಪೋಟ ಪ್ರಕರಣ ವಿಚಾರವಾಗಿ, ಎನ್ಐಎ ತನಿಖೆ ನಡೆಸುತ್ತಿದ್ದು ವರದಿ ಬರುವವರೆಗೂ ಕಾಯಬೇಕಿದೆ. ಅಧಿಕೃತ ವರದಿ ಬರಲಿ, ವರದಿ ಬಂದ ನಂತರ ಮಾತನಾಡುತ್ತೇನೆ. ಬೆಂಗಳೂರಿನಲ್ಲಿ ಮನೆಗಳನ್ನು ತೆರವು ಮಾಡಿದ ವಿಚಾರವಾಗಿ ಕೇರಳ ಸಿಎಂ ಟೀಕಿಸಿದ ವಿಚಾರವಾಗಿ ಅದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ. ಏನೇ ಮಾಡಿದ್ರು ಕಾನೂನಾತ್ಮಕವಾಗಿ ಮಾಡಬೇಕು ಎಂದರು.
ಜಿ ರಾಮ್ ಜೀ ಹೆಸರು ಬದಲಾವಣೆ ಸಂಬಂಧ ಕಾಂಗ್ರೆಸ್ ಹೋರಾಟದ ವಿಚಾರವಾಗಿ, ಕಾಂಗ್ರೆಸ್ (Congress ) ಜನರ ದಿಕ್ಕು ತಪ್ಪಿಸುವುದರ ಜೊತೆಗೆ ಅಪಪ್ರಚಾರ ಮಾಡುವ ತಂತ್ರಗಾರಿಕೆ ಮಾಡುತ್ತಿದೆ. ಇದೆಲ್ಲಾ ಎಲೆಕ್ಷನ್ ಗಿಮಿಕ್. ಬಿಜೆಪಿ ವಿರೋಧ ಪಕ್ಷವಾಗಿ ಉತ್ತಮ ಕೆಲಸ ಮಾಡುತ್ತಿದೆ. ನಾವು ಈಗ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ, ಮುಂದೆಯೂ ಮಾಡುತ್ತೇವೆ. 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಸಿಎಂ ಕುರ್ಚಿ ವಿಚಾರಕ್ಕೆ ಹಗ್ಗ ಜಗ್ಗಾಟ ಮಾಡುವುದು ಸರಿಯಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಕುರ್ಚಿಗಾಗಿ ಹೋರಾಟ ಮಾಡುತ್ತಿರುವುದು ಖಂಡನೀಯ ಎಂದರು. ಇದನ್ನೂ ಓದಿ: ಕ್ರಿಸ್ಮಸ್ ಆಚರಣೆ ವೇಳೆ ಯುವತಿಯ ಖಾಸಗಿ ಅಂಗ ಮುಟ್ಟಿ ಕಿರುಕುಳ – ಡೆಲಿವರಿ ಬಾಯ್ ಅರೆಸ್ಟ್

