ಹೊಸ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಮಯ ಕೊಡಬೇಕು: ಯದುವೀರ್

Public TV
1 Min Read

ಮಂಡ್ಯ: ರಾಜ್ಯದಲ್ಲಿ ಈಗತಾನೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಭರವಸೆ ನೀಡಿರುವ ಯೋಜನೆಗಳ ಅನುಷ್ಠಾನಕ್ಕೆ ಸಮಯ ಕೊಡಬೇಕು ಒಂದಿಷ್ಟು ಸಮಯ ನೀಡಿದ ಬಳಿಕ ಯಾವ ರೀತಿ ಆಳ್ವಿಕೆ ನೋಡಬೇಕು ಎಂದು ಮೈಸೂರು ರಾಜ ವಂಶಸ್ಥ ಯದುವೀರ್ (Yaduveer Chamaraja Wadiyar) ಅಭಿಪ್ರಾಯ ಪಟ್ಟಿದ್ದಾರೆ.

ಮಂಡ್ಯ (Mandya) ದ ಕಾಡುಕೊತ್ತನಹಳ್ಳಿಯಲ್ಲಿ ಮಾತನಾಡಿದ ಯದುವೀರ್ ಒಡೆಯರ್, ಈತನೇ ಸರ್ಕಾರ ರಚನೆಯಾಗಿದೆ. ಅವರ ಯೋಜನೆಗಳ ಅನುಷ್ಠಾನಕ್ಕೆ ಒಂದಷ್ಟು ಸಮಯ ನೀಡಬೇಕು. ಅದಾದ ಮೇಲೆ ಸರ್ಕಾರದ ಬಗ್ಗೆ ಅಭಿಪ್ರಾಯ ಹೇಳಬಹುದು ಎಂದು ರಾಜ್ಯದ ನೂತನ ಸರ್ಕಾರದ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ನಾನು ರಾಜಕೀಯಕ್ಕೆ ಬರಬಹುದು ಅಂತ ಮಾತು ಹಲವು ದಿನಗಳಿಂದ ಕೇಳಿಬರುತ್ತಿದೆ. ಆದರೆ ನಾನು ಬೇಕಾದಷ್ಟು ಸಾರಿ ಹೇಳಿದ್ದೇನೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಅಂತ. ಅರಮನೆ ಸಂಪ್ರದಾಯ ಪಾಲನೆ ಮತ್ತು ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಅಷ್ಟೇ ಎಂದು ಯದುವೀರ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

Share This Article